ಭವಿಷ್ಯ

04 ಜನವರಿ:ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ಜನವರಿ ೦೪, ೨೦೧೯
ಸೂರ್ಯೋದಯ :೦೭:೧೬
ಸೂರ್ಯಾಸ್ತ :೧೮:೧೦

ಪಕ್ಷ : ಕೃಷ್ಣ ಪಕ್ಷ
ತಿಥಿ : ಚತುರ್ದಶೀ – ೨೮:೫೭+ ವರೆಗೆ
ನಕ್ಷತ್ರ :ಜ್ಯೆಷ್ಟ್ಯ – ೧೨:೫೪ ವರೆಗೆ
ಯೋಗ : ವೃದ್ಧಿ – ೨೫:೫೨+ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :೧೨:೨೧ – ೧೩:೦೪
ಅಮೃತಕಾಲ : ಯಾವುದೂ ಇಲ್ಲ
ರಾಹು ಕಾಲ: ೧೧:೨೨ – ೧೨:೪೩
ಗುಳಿಕ ಕಾಲ: ೦೮:೪೦ – ೧೦:೦೧
ಯಮಗಂಡ:೧೫:೨೪ – ೧೬:೪೫

ನೀವು ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ಮುಂದಿನ ದಿನಗಳಿಗೆ ಅನುಕೂಲವಾಗುವುದು. ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕಿಂತ ವಾಸ್ತವದ ಅರಿವಿರಲಿ. ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ನೀವೆಷ್ಟು ತಾಳ್ಮೆಯಿಂದ ಇರುವಿರೋ ಅಷ್ಟು ನಿಮಗೆ ಒಳ್ಳೆಯದೇ ಆಗುವುದು

 

ಇದುವರೆಗೂ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಾನಸಿಕ ಒತ್ತಡದಿಂದ ದೂರವಾಗುವಿರಿ.ಸಮಯಕ್ಕೆ ಸರಿಯಾಗಿ ಸ್ನೇಹಿತರ ಸಹಾಯ ದೊರೆಯಲಿದೆ. ಸಮಾಜ ಸೇವೆ ಮಾಡಲು ಬಯಸುವಿರಿ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳಲು ಶಿವವನ್ನು ಧ್ಯಾನಿಸಿ.

 

ಕಾರ್ಯಗಳ ಒತ್ತಡಗಳಿಂದಾಗಿ ನಿಮ್ಮ ವೈಯಕ್ತಿಕ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಉಂಟಾಗುತ್ತದೆ. ತಪ್ಪು ನಿರ್ಧಾರಗಳಿಂದಾಗಿ ನಷ್ಟ ಅನುಭವಿಸಬೇಕಾಗುವುದು. ಕೆಲವು ಪ್ರಸಂಗಗಳಲ್ಲಿ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡದೆ ದೃಢ ನಿರ್ಧಾರ ತೆಗೆದುಕೊಳ್ಳಬೇಡಿ.

 

ಅಪರಿಚಿತರ ಪರಿಚಯದಿಂದ ನಿಮ್ಮ ಜೀವನ ಶೈಲಿಯೇ ಬದಲಾಗುವುದು.ಹಳೆ ತಾಪತ್ರಯ ನಿವಾರಣೆಯಾಗಿ ನಿರಾಳತೆ ಮೂಡಲಿದೆ.

 

 

ಗೊಂದಲಗಳಿಂದ ಕೂಡಿದ ವಿಚಾರಗಳಲ್ಲಿ ಮಧ್ಯೆ ಪ್ರವೇಶಿಸುವುದು ಒಳ್ಳೆಯದಲ್ಲ. ಇದರಿಂದ ನೀವಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ,ಖರ್ಚಿನ ಬಗ್ಗೆ ತೀವ್ರ ಹಿಡಿತ ಸಾಧಿಸುವುದು ಒಳ್ಳೆಯದು.

 

 

ಹಲವು ಸಂದರ್ಭಗಳಲ್ಲಿ ನೀವು ಆಡಲಿರುವ ಮಾತು ಯಾವುದೋ ತಿರುವಿನಲ್ಲಿ ಅದರ ಸ್ವರೂಪವೇ ಬದಲಾಗಲಿದೆ. ಇದು ಮತ್ತೊಬ್ಬರನ್ನು ಸಿಟ್ಟಿನಿಂದ ಕೆರಳುವಂತೆ ಮಾಡುತ್ತದೆ.

 

 

 

ಬೇಡದ ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡು ಸದಾ ಆಲೋಚಿಸುವ ನಿಮ್ಮ ಈ ಸ್ವಭಾವ ಬೇರೆಯವರ ಚಿಂತೆಗೆ ಕಾರಣವಾಗುವುದು. ಎಂತಹ ಸುಂದರ ಸನ್ನಿವೇಶ ಹಾಗೂ ಸಂದರ್ಭಗಳೂ ನಿಮಗೆ ಮುದ ನೀಡದೆ ಹೋಗಬಹುದು.

 

 

ಇದ್ದದ್ದನ್ನು ಇದ್ದಂತೆ ಹೇಳಿದರೆ ಎದೆಗೆ ಬಂದು ಒದ್ದ ಎನ್ನುವಂತೆ ನೀವು ಹೇಳುವ ವಿಚಾರ ಸತ್ಯವಾಗಿದ್ದರೂ ಅದನ್ನು ಸ್ವೀಕರಿಸುವ ಜನರಿಗೆ ಅಪಥ್ಯವಾಗುವುದು. ಇದರಿಂದ ನಿಮಗೆ ವಿರೋಧಿಗಳು ಹೆಚ್ಚಾಗುವ ಸಂಭವವಿದೆ.

ನೀವು ಹೋಗುತ್ತಿರುವ ದಾರಿ ಸರಿಯಾಗಿದ್ದು ಅದರ ಬಗ್ಗೆ ಗೊಂದಲ ಬೇಡ. ಬೇರೆಯವರ ಮಾತುಗಳು ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ದೃಢ ನಿರ್ಧಾರ ಎಲ್ಲರಿಗೂ ಸಂತಸ ತರಲಿದೆ.

 

 

ನಿಮ್ಮ ಪ್ರಗತಿ ಸಹಿಸದ ಕೆಲವರು ನಿಮ್ಮನ್ನು ಪ್ರಚೋದಿಸಿ ಬಾಯಿಂದ ನಿಷ್ಠುರದ ಮಾತುಗಳು ಬರುವಂತೆ ಮಾಡುವರು. ಮಾತನಾಡುವಾಗ ಸಮಯ ಸಂದರ್ಭದ ಅರಿವಿರಲಿ.

 

ಕೆಲವು ವಿಷಯಗಳಲ್ಲಿ ಅತಿ ಬುದ್ಧಿವಂತಿಕೆ ತೋರದೆ ಸಹಜವಾಗಿ ಹೊಂದಿಕೊಂಡು ಹೋಗುವುದು ಬುದ್ಧಿವಂತರ ಲಕ್ಷ ಣ. ಬರಲಿರುವ ಉತ್ತಮ ಅವಕಾಶಗಳನ್ನು ನಿಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದನ್ನು ಕಲಿಯಿರಿ.

 

ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಮಡದಿಯೊಂದಿಗೆ ಮನಸ್ತಾಪ,ಆರೋಗ್ಯ ಅಲಕ್ಷಿಸದೆ  ವೈದ್ಯರ ಸಲಹೆ ಪಡೆಯಿರಿ. ನಿಮ್ಮ ದುಡುಕು ಸ್ವಭಾವವೇ ನಿಮ್ಮ ತೊಂದರೆಗಳಿಗೆ ಕಾರಣವಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top