ಹೆಚ್ಚಿನ

ಭಗವದ್ಗೀತೆಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಭಗವದ್ಗೀತೆಯ ಕುರಿತಾದ ಅಚ್ಚರಿ ಹುಟ್ಟಿಸುವ ಸಂಗತಿಗಳು!

ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಮಾಡಿದ ಉಪದೇಶವೇ ಭಗವದ್ಗೀತೆ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದ ಭಗವದ್ಗೀತೆಯ ವಿಶಾಲತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯವೇ ಸರಿ. ಹೀಗಿರುವಾಗ ಪ್ರಪಂಚದ ಶ್ರೇಷ್ಠ ಗ್ರಂಥವಾದ ಶ್ರೀ ಭಗವದ್ಗೀತೆಯ ಬಗ್ಗೆ ಗೊತ್ತಿರದ ಕೆಲವೊಂದಿಷ್ಟು ಆಶ್ಚರ್ಯಕರ ಸಂಗತಿಗಳನ್ನು ತಿಳಿದುಕೊಳ್ಳಲೂ ಪ್ರಯತ್ನಿಸೋಣ ಬನ್ನಿ :

 

 • ಕುರುಕ್ಷೇತ್ರದ ರಣಭೂಮಿಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ರವಿವಾರದಂದು ಭಗವದ್ಗೀತೆಯನ್ನು ಭೋದಿಸಿದ.
 • ಸುಮಾರು 7 ಸಾವಿರ ವರ್ಷಗಳ ಹಿಂದೆಯೇ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ್ದು ವಿಶೇಷ.
 • ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಲು ತೆಗೆದುಕೊಂಡಿದ್ದು ಕೇವಲ 45 ನಿಮಿಷ.
 • ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುವುದರ ಹಿಂದೆ ಕಾರಣವಿದ್ದು. ‘ಅರ್ಜುನ ತಾನೂ ಕ್ಷತ್ರಿಯನಿಗೆ ಯುದ್ಧ ಮಾಡುವುದು ತನ್ನ ಕರ್ತವ್ಯವೆಂದು ತಿಳಿದಿದ್ದರೂ ಬೇಸರಗೊಂಡು ತನ್ನ ಈ  ಕರ್ತವ್ಯದಿಂದ ವಿಮುಖನಾಗಲು ಬಯಸಿದಾಗ ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟುಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನುನೀಡಲು ಶ್ರೀ ಕೃಷ್ಣ ಪರಮಾತ್ಮ ಗೀತೆಯನ್ನು  ಅರ್ಜುನನಿಗೆಬೋಧಿಸಿದ’ ಎಂದು ತಿಳಿದು ಬಂದಿದೆ.

 

 • ಭಗವದ್ಗೀತೆಯಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿದ್ದು 700 ಶ್ಲೋಕಗಳಿವೆ.
 • ಭಗವದ್ಗೀತೆಯಯಲ್ಲಿ ಕಂಡು ಬರುವ ಪ್ರಮುಖ ವಿಷಯಗಳೆಂದರೆ,  ಜ್ಞಾನ – ಭಕ್ತಿ – ಕರ್ಮ – ಯೋಗ.
 • ಅರ್ಜುನನನ್ನು ಬಿಟ್ಟರೆ ಕೃಷ್ಣ ಪರಮಾತ್ಮ ಹೇಳಿದ ಬೋಧನೆಯನ್ನು ಕೇಳಿಸಿಕೊಂಡಿದ್ದು ಧೃತರಾಷ್ಟ್ರ ಹಾಗೂ ಸಂಜಯ.
 • ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಭಗವಾನ್ ಸೂರ್ಯದೇವನಿಗೆ ತಿಳಿದಿತ್ತು ಎಂದು ಹೇಳಲಾಗುತ್ತದೆ.

 

 

 • ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ 23 ನೇ ಅಧ್ಯಾಯದಿಂದ 40 ನೇ ಅಧ್ಯಾಯದ ನಡುವೆ ಬರುವ ಭಾಗ.
 • ಕೆಲವೊಮ್ಮೆ ಯೋಗೋಪನಿಷತ್, ಅಥವಾ ಗೀತೋಪನಿಷತ್, ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ.
 • “ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದು” ಎಂಬುದು ಗೀತೆಯ ಸಾರಾಂಶವಾಗಿದೆ.
 •  ಭಗವದ್ಗೀತೆಯಲ್ಲಿ ಶ್ರೀಕೃಷ್ಣ – 574 , ಅರ್ಜುನ – 85, ಸಂಜಯ – 40 ಹಾಗೂ ಧೃತರಾಷ್ಟ್ರ – 01 ಶ್ಲೋಕಗಳನ್ನು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top