fbpx
ಸಮಾಚಾರ

ಗುಜರಾತಿನ ಶಾಲಾ ಮಕ್ಕಳು ಇನ್ನುಮುಂದೆ ಹಾಜರಾತಿಯ ವೇಳೆ ‘ಪ್ರೆಸಂಟ್ ಸರ್’ ಅಥವಾ ‘ಯೆಸ್ ಸರ್’ ಅನ್ನುವ ಹಾಗಿಲ್ಲ – ಹಾಗಾದರೆ ಇನ್ನೇನೆಂದು ಉಚ್ಚರಿಸಬೇಕು ಗೊತ್ತೇ ?

ಗುಜರಾತಿನ ಶಾಲೆಗಳೂ ಒಂದು ಮಹತ್ತರ ಬದಲಾವಣೆಗೆ ಸಾಕ್ಷಿಯಾಗಲಿದ್ದು, ಈ ಬದಲಾವಣೆಯನ್ನು ಹೊರಡಿಸಿದ ಸರ್ಕಾರದ ಬಗ್ಗೆ ದೇಶದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಹೌದು, ಮೇಲೆ ಹೇಳಿದಂತೆ ಗುಜರಾತಿನ ಸರ್ಕಾರ ಅಲ್ಲಿನ ಶಾಲೆಗಳಲ್ಲಿ ತರಲು ಹೊರಟಿರುವ ‘ಈ ನಿಯಮ’ ಶ್ಲಾಘನೀಯವಾಗಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಯಾವುದೀ ಬದಲಾವಣೆ ಅಥವಾ ಯಾವುದೀ ನಿಯಮ ಅನ್ನೋ ಪ್ರಶ್ನೆ ನಿಮಗೆ ಕಾಡುತ್ತಿದೆಯೇ? ಇಲ್ಲಿದೆ ನೋಡಿ ನಿಮ್ಮ ಪ್ರಶ್ನೆಗೆ ಉತ್ತರ….

ಗುಜರಾತಿನ ಶಾಲೆಗಲ್ಲಿ ಇನ್ನು ಮುಂದೆ ಮಕ್ಕಳು ಹಾಜರಾತಿಯ ವೇಳೆ ‘ಪ್ರೆಸಂಟ್ ಸರ್ ಅಥವಾ ‘ಯೆಸ್ ಸರ್‘ ಎಂದು ಹೇಳುವ ಬದಲಿಗೆ ‘ ಜೈ ಹಿಂದ್ ‘ ಅಥವಾ ‘ಜೈ ಭಾರತ್‘ ಎಂದು ಉಚ್ಚರಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದ್ದು ಈ ಮೂಲಕ ವರ್ಷಾನುಗಟ್ಟಲೆಯಿಂದ ಹಾಜರಾತಿಯ ವೇಳೆ ‘ಪ್ರೆಸಂಟ್ ಸರ್ ಅಥವಾ ‘ಯೆಸ್ ಸರ್‘ ಹೇಳುತ್ತಿದ್ದ ಪದ್ದತಿಗೆ ಗುಜರಾತ್ ಸರ್ಕಾರ ಗುಡ್ ಬೈ ಹೇಳಿದೆ. ಹೀಗಾಗಿ ಸರ್ಕಾರ ತಂದಿರುವ ಈ ನಿಯಮಕ್ಕೆ ಜನಸಮಾನ್ಯರು ತಲೆದೂಗಿದ್ದಾರೆ.

ಒಟ್ಟಿನಲ್ಲಿ ಈ ರೀತಿ ‘ಜೈಘೋಷ’ ಗಳನ್ನೂ ಮಕ್ಕಳಿಂದ ಹೇಳಿಸುವ ಮುಖಾಂತರ ದೇಶ ಭಕ್ತಿಯ ಪ್ರಖರತೆಯನ್ನು ಮಕ್ಕಳಿಗೆ ಅರ್ಥ ಮಾಡಿಸಲು ಹೊರಟಿರುವ ಸರ್ಕಾರದ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯಕ್ಕೆ ಸರ್ಕಾರೀ ಅನುದಾನ ಪಡೆಯುವ ಸರ್ಕಾರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ಗುಜರಾತಿನ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top