ಸಮಾಚಾರ

ಬಾಕ್ಸ್ ಆಫೀಸ್ ನಲ್ಲಿ ದ್ವಿಶತಕ ಭಾರಿಸಿದ ಕೆಜಿಎಫ್- ಮುಂದುವರೆದ ರಾಕಿ ಭಾಯ್ ನಾಗಾಲೋಟ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐತಿಹಾಸಿಕ ದಾಖಲೆ ಬರೆದಿದ್ದು 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ, 10 ದಿನದಲ್ಲಿ 150 ಕೋಟಿ ರೂಪಾಯಿಯನ್ನು ಗಳಿಸಿತ್ತು. ಈಗ 19ನೇ ದಿನಕ್ಕೆ ಬರೋಬ್ಬರಿ 200 ಕೋಟಿ ರೂ.ಗಳಿಕೆ ಕಂಡಿದೆ. ಅದರಲ್ಲೂ ಕರ್ನಾಟಕದಲ್ಲೇ 120 ಕೋಟಿ ಕಲೆಕ್ಷನ್ ಮಾಡಿರುವುದು ವಿಶೇಷವಾಗಿದೆ.

ಹಿಂದಿಯ ಲೆಕ್ಕಾಚಾರ ಪರಿಣತ ತರಣ್‌ ಆದರ್ಶ್ ಪ್ರಕಾರ, ‘ಕೆಜಿಎಫ್‌’ ಹಿಂದಿಯಲ್ಲಿ ಈಗಾಗಲೇ 37 ಕೋಟಿ ಗಳಿಸಿದ್ದು ಇನ್ನು ಯುಎಸ್‌ಎನಲ್ಲಿ ಚಿತ್ರ ಈಗಾಗಲೇ . 5.31 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ತೆಲುಗು ಭಾಷೆಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ದಾಖಲಾಗಿದೆ ಎನ್ನಲಾಗಿದೆ. ಇವೆಲ್ಲವೂ ಸೇರಿ ಐದು ಭಾಷೆಯಲ್ಲಿ ಬಿಡುಗಡೆಯಾದ ಚಿತ್ರದ ಗಳಿಕೆ 200 ಕೋಟಿ ರುಪಾಯಿ ತಲುಪಿದೆ.

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಐದು ಭಾಷೆಗಳಲ್ಲಿ ಕ್ರಿಸ್​ಮಸ್​ ಪ್ರಯುಕ್ತ ಡಿ.21ರಂದು ಚಿತ್ರ ತೆರೆಕಂಡಿತ್ತು. ಘಟಾನುಘಟಿ ನಟರ ಸಿನಿಮಾಗಳ ಮಧ್ಯೆಯೇ ತೆರೆಕಂಡು ಗೆಲುವಿನ ನಗೆ ಬೀರಿತ್ತು. ಈಗ ಬಿಡುಗಡೆಯಾದ 18 ದಿನಗಳಲ್ಲಿ 200 ರೂ. ಸೇರಿದೆ. ಈ ಮೂಲಕ ಗಳಿಕೆಯಲ್ಲಿ ದ್ವಿಶತಕ ಗಳಿಕೆ ಮಾಡಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಕೆಜಿಎಫ್’ ಪಾತ್ರವಾಗಿದೆ​.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top