ಸಮಾಚಾರ

ಪ್ರೀತಿಯ ಶಿಕ್ಷಕನಿಗೆ ರಾಯಲ್ ಎನ್‌ಫೀಲ್ಡ್ ಬೈಕನ್ನು ಉಡುಗೊರೆಯಾಗಿ ನೀಡಿದ ವಿದ್ಯಾರ್ಥಿವೃಂದ !

ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲೂ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪಗಳಂತಿರುತ್ತಾರೆ. ಶಿಕ್ಷಕರೇ ಹಾಗೆ ಮೇಣದ ಬತ್ತಿಯಂತೆ, ತಾವು ಉರಿದರೂ ಮಕ್ಕಳ ಬದುಕಿಗೆ ಬೆಳಕ ನೀಡುವರು.

ಇಂದಿಗೂ ಸಹ ಎಷ್ಟೋ ವಿದ್ಯಾರ್ಥಿಗಳ ಸಾಧನೆಯ ಹಿಂದಿರುವ ಕಾಣದ ಕೈಗಳು ಶಿಕ್ಷಕರೇ , ನಿಷ್ಕಲ್ಮಶವಾಗಿ ವಿದ್ಯಾರ್ಥಿಗಳನ್ನು ಶಿಕ್ಷಕರು ಹರಸುವ ಪರಿಯೇ ಮನಮೋಹಕ. ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡಿ ಸಲಹುವ ಶಿಕ್ಷಕರು ದೇವರ ಪ್ರತಿರೂಪ ಎಂಬುದರಲ್ಲಿ ಸಂಶಯವೇ ಇಲ್ಲಾ.

ಇದೀಗ ಅಂತಹ ಅಪರೂಪದ ಶಿಕ್ಷಕರಾದ ಶ್ರೀ ವೇದಮುತ್ತು ರವರು ಮದುರೈಯಲ್ಲಿರುವ ಸಿಎಸ್‌ಐ ಶಾಲೆಯಲ್ಲಿ 27 ವರ್ಷಗಳಷ್ಟು ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು ಇದೀಗ ನಿವೃತ್ತಿಯಾಗಿ ಶಾಲೆ ಬಿಟ್ಟು ತೆರಳುವಾಗ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಅವರಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಗಾಡಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೌದು, ಇದು ಅಚ್ಚರಿ ಎನಿಸಿದರೂ ನೀವು ನಂಬಲೇ ಬೇಕು! ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ಮಕ್ಕಳನ್ನು ಒಂದೇ ರೀತಿ ನೋಡುತ್ತಿದ್ದ ಶ್ರೀ ವೇದಮುತ್ತು ರವರು ಎಲ್ಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಗುರುವಿಗೆ ಮಕ್ಕಳೆಲ್ಲ ಸೇರಿ ಬುಲೆಟ್ ಗಾಡಿಯನ್ನು ಉಡುಗೊರೆಯಾಗಿ ನೀಡಿರುವ ಸಂತಸದಾಯಕ ಸುದ್ದಿ ತಮಿಳುನಾಡಿನಿಂದ ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top