ಸಮಾಚಾರ

ಅಂಗನವಾಡಿಗೆ ಮಗು ದಾಖಲಿಸಿ ಸರಳತೆ ಮೆರೆದ ಐಎಎಸ್‌ ಅಧಿಕಾರಿ

ಇತ್ತೀಚಿಗೆ ತಮ್ಮ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸಿ ಓದಿಸಬಬೇಕು ಎಂಬುದು ಬಹುತೇಕ ಪೋಷಕರ ಬಯಕೆ. ದೊಡ್ಡ ಶಾಲೆಯಲ್ಲಿ ಮಕ್ಳಳನ್ನು ಓದಿಸಿದರೆ ಮಾತ್ರ ಅವರ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂಬುದು ಹಲವು ಪೋಷಕರ ಅಂಬೋಣ ಸಹ ಹಾಗಾಗಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಪ್ರಿ-ಕೆಜಿ ಯಿಂದಲೇ ಒಳ್ಳೆಯ ಶಾಲೆಗಳಿಗೆ ಸೇರಿಸುವ ಯೋಜನೆಯನ್ನು ಮಾಡಿಕೊಂಡು ಬಿಟ್ಟಿರುತ್ತಾರೆ.

ಆದರೆ ವಿಶೇಷ ಏನೆಂದರೆ ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಅಲಂಕರಿಸಿರುವ ತಮಿಳುನಾಡಿನ ತಿರುವನೆಲ್ಲಿ ಜಿಲ್ಲಾಧಿಕಾರಿದ ಶಿಲ್ಪಾ ಪ್ರಭಾಕರ್ ಸತೀಶ್ ತಮ್ಮ ಮಗಳನ್ನು ಪಲಾಯಕಮೊಟ್ಟಿಯಲ್ಲಿರುವ ಅಂಗನವಾಡಿಗೆ ದಾಖಲಿಸುವುದರ ಮೂಲಕ ಸರಳತೆಯ ಕೇತನವನ್ನು ಎತ್ತಿ ಹಿಡಿದ್ದಾರೆ.

ಈ ಬಗ್ಗೆ ಸ್ವತಃ ಮಾತನಾಡಿರುವ ಐಎಎಸ್ ಆಫೀಸರ್ ಶಿಲ್ಪಾ ಪ್ರಭಾಕರ್ ಸತೀಶ್ ” ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ, ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ” ಎಂದು ಶಿಲ್ಪಾ ಹೇಳಿದ್ದಾರೆ.

ಒಟ್ಟಿನಲ್ಲಿ ದೊಡ್ಡ – ದೊಡ್ಡ ಅಧಿಕಾರಿಗಳು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಸ್ಕೂಲು, ಕಾಲೇಜುಗಳಿಗೆ ಸೇರಿಸುವಾಗ, ಶಿಲ್ಪಾ ಪ್ರಭಾಕರ್ ಸತೀಶ್ ರವರಂತಹ ದಕ್ಷ ಅಧಿಕಾರಿಗಳು ಈ ರೀತಿಯ ಸರಳಜೀವನ ನಡೆಸುವುದರ ಮೂಲಕ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top