fbpx
ಮನೋರಂಜನೆ

ಸಿನಿಮಾ ಸೋತಿದ್ದಕ್ಕೆ ಸಾಯಿ ಪಲ್ಲವಿ ಮಾಡಿದ್ದೇನು ಗೊತ್ತಾ? ಇತರ ನಟಿಯರಿಗೆ ಮಾದರಿಯಾದಳು ಪ್ರೇಮಂ ಹುಡುಗಿ.

ಅದ್ಬುತ ನಟಿಯಾಗಿರುವ ಸಾಯಿ ಪಲ್ಲವಿ, ಹಲವರ ಮೆಚ್ಚಿನ ನಟಿ. ಅಚ್ಚುಕ್ಕಟ್ಟಾಗಿ ಅಭಿನಯಿಸುವ ಈ ಬೆಡಗಿ ತನ್ನ ಹಾವಭಾವದಲ್ಲೇ ಅಭಿಮಾನಿಗಳನ್ನು ಮೋಡಿ ಮಾಡುವ ವಿಶಿಷ್ಟ ಕಲಾಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಿರುವಾಗ ಕೇವಲ ನಟನೆಯಲ್ಲಿ ಮಾತ್ರ ಎಲ್ಲರ ಮನಸೂರೆಗೊಳ್ಳದ ಈ ನಟಿ ಇದೀಗ ತನ್ನ ಒಂದು ದಿಟ್ಟ ನಿರ್ಧಾರದಿಂದ ಅಥವಾ ನಡೆಯಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ.

ಹೌದು, ಕಳೆದ ವರ್ಷ ರಿಲೀಸ್‌ ಆದ ‘ಪದಿ ಪದಿ ಲೇಚೆ ಮನಸ್ಸು’ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಸಾಯಿ ಪಲ್ಲವಿ ಇದೀಗ ಆ ಚಿತ್ರಕ್ಕಾಗಿ ಪಡೆದ ಸಂಭಾವನೆಯನ್ನು ಹಿಂತಿರುಗಿಸಿದ್ದಾರೆ. ನಿಜ! ಅಷ್ಟಕ್ಕೂ ಸಾಯಿ ಪಲ್ಲವಿ ತಾವು ಈ ಚಿತ್ರಕ್ಕಾಗಿ ಪಡೆದ ಸಂಭಾವನೆಯನ್ನು ಹಿಂದುರಿಗಿಸಿರುವುದರ ಹಿಂದೆ ಒಂದು ಕಾರಣವಿದೆ. ಅಸಲಿಗೆ ಆ ಕಾರಣ ಏನೆಂದರೆ, ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ ‘ ಪದಿ ಪದಿ ಲೇಚೆ ಮನಸ್ಸು’ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ನಟನೆಯ ಬಗ್ಗೆ ಒಳ್ಳೆಯ ಅಭಿಪ್ರಯಾಗಲು ವ್ಯಕ್ತವಾದರೂ ಸಿನಿಮಾ ಮಾತ್ರ ನೆಲಕಚ್ಚಿತು ಆಗಾಗಿ ಇಡೀ ಚಿತ್ರ ತಂಡಕ್ಕೆ ನಷ್ಟವಾಯಿತೆಂದು ಮನಗಂಡ ನಟಿ ಸಾಯಿ ಪಲ್ಲವಿ ತಾನು ಪಡೆದ ಸಂಭಾವನೆಯನ್ನು ಚಿತ್ರ ತಂಡಕ್ಕೆ ಹಿಂದುರುಗಿಸಿದ್ದಾರೆ ಎಮ್ಬ ವಿಚಾರ ಈಗ ಬೆಳಕಿಗೆ ಬಂದಿದೆ.

ಹಣಕ್ಕಾಗಿಯೇ ಅಭಿನಯಿಸುವ ನೂರಾರು ನಟಿಯರ ನಡುವೆ ನಿಸ್ವಾರ್ಥವಾಗಿ ನಡೆದುಕೊಂಡ ತಮ್ಮ ಮೆಚ್ಚಿನ ನಟಿಯ ಬಗ್ಗೆ ಅಭಿಮಾನಿಗಳು ಹೊಗಳಿಕೆಯ ಸುರಿಮಳೆಯನ್ನೇ ಸುರಿಸುತಿದ್ದು. ಸಾಯಿ ಪಲ್ಲವಿಯವರ ನಟನೆಗೂ ಮತ್ತು ಮಾನವೀಯತೆಗೂ ಜನರು ಫಿದಾ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top