ಸಮಾಚಾರ

ಈ ನಟಿಯ ಬದುಕು ಬದಲಿಸಿದ ಕೆಜಿಎಫ್ ಸಿನಿಮಾ!

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸಿದ ಅತ್ಯದ್ಭುತ ಚಲನಚಿತ್ರ. ಹೊಸ ಮುಖಗಳನ್ನು ತೆರೆ ಮೇಲೆ ತಂದು ಅವರಿಂದ ಗಮನರ್ಹ ನಟನೆಯನ್ನು ಹೊರತೆಗೆಸಿದ ಕೀರ್ತಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು. ಕೇವಲ ದಾಖಲೆಗಳನ್ನು ಮಾತ್ರ ಸೃಷ್ಟಿ ಮಾಡದ ಕೆಜಿಎಫ್, ಈ ಸಿನಿಮಾದಲ್ಲಿ ನಟಿಸಿರುವ ಅನೇಕ ಕಲಾವಿದರಿಗೆ ಅನೇಕ ಅವಕಾಶಗಳು ಆರಿಸಿ ಬರುವಂತೆ ಮಾಡಿದೆ.

ಹೌದು, ಕೆಜಿಎಫ್ ಸಿನಿಮದಲ್ಲಿ ನಟಿಸಿದ ಅನೇಕ ಕಲಾವಿದರಿಗೆ ಈಗ ಚಿತ್ರಲೋಕ ಕೈ ಬಿಸಿ ಕರೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಜಿಎಫ್ ಸಿನಿಮಾದಲ್ಲಿ ತನ್ನ ಹೆಣ್ಣು ಮಗುವನ್ನು ಉಳಿಸಿಕೊಳ್ಳುವ ಅಸಹಾಯಕ ತಾಯಿ ಪಾತ್ರದಲ್ಲಿ ಮತ್ತು ಕಾರ್ಮಿಕಳಾ ಪಾತ್ರದಲ್ಲಿ ಕಾಣಿಸಿದ್ದ ‘ರೂಪಾ ರಾಯಪ್ಪ’ ರವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಅದಕ್ಕೆ ಪೂರಕಾಗಿ ರೂಪಾ ರಾಯಪ್ಪ ರವರಿಗೆ ಸಿನಿಮಾಗಳಿಂದ ಅವಕಾಶಗಳು ಬರುತ್ತಿವೆ.

ಈ ಬಗ್ಗೆ ಸ್ವತಃ ಮಾತನಾಡಿರುವ ರೂಪಾ ರಾಯಪ್ಪ ರವರು, ‘ನಾನು ಮೂಲತಃ ರಂಗ ನಟಿ. ವಿ ಮೂವ್‌, ಪ್ರಕಸಂ, ಬೆಂಗಳೂರು ಲಿಟಲ್‌ ಥಿಯೇಟರ್‌ ತಂಡಗಳಲ್ಲಿ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಕೆಜಿಎಫ್‌ ಸಿನಿಮಾಗೆ ಆಡಿಷನ್‌ನಲ್ಲಿ ಸೆಲೆಕ್ಟ್ ಆಗಿದ್ದೆ. ಆ ಸಿನಿಮಾದಲ್ಲಿ ನನ್ನ ನಟನೆ ನೋಡಿದ ಸಾಕಷ್ಟು ಮಂದಿ ನನಗೆ ಈಗ ಸಿನಿಮಾದಲ್ಲಿ ಆಫರ್‌ ನೀಡುತ್ತಿದ್ದಾರೆ. ಆದರೆ ನಾನು ಒಳ್ಳೆ ಪಾತ್ರಗಳ ತಲಾಶ್‌ನಲ್ಲಿದ್ದೇನೆ. ಸದ್ಯ ಈಗ ಮೈಸೂರು ಡೈರೀಸ್‌ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top