fbpx
Astrology

12 ಜನವರಿ:ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೧೨ ಜನವರಿ ೨೦೧೯
ಸೂರ್ಯೋದಯ : ೦೭:೧೯
ಸೂರ್ಯಾಸ್ತ : ೧೭:೩೯
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಪೂರ್ವಾ ಭಾದ್ರ
ಯೋಗ : ಪರಿಘ
ಅಮೃತಕಾಲ : ೨೯:೫೦ – ೩೧:೩೫

ರಾಹು ಕಾಲ: ೦೯:೫೪ – ೧೧:೧೧
ಗುಳಿಕ ಕಾಲ: ೦೭:೧೯ – ೦೮:೩೬
ಯಮಗಂಡ: ೧೩:೪೬ – ೧೫:೦೪

ಮೇಷ (Mesha)


ಆಗಾಗ ದೇಹಾರೋಗ್ಯ ಏರುಧಿಪೇರಾದೀತು. ಆರ್ಥಿಕವಾಗಿ ಹೆಚ್ಚಿನ ಅನುಕೂಲವಾದರೂ ಜಾಗ್ರತೆ ಇರಲಿ. ದಾಯಾದಿಗಳು ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಯಾರು. ಅನಿರೀಕ್ಷಿತ ಶುಭವಾತೆ ಆಚ್ಚರಿ ತಂದೀತು.

ವೃಷಭ (Vrushabh)


ವ್ಯಾಪಾರ, ವ್ಯವಹಾರಗಳು ಹೆಚ್ಚಿನ ಲಾಭಕರವಾಗಲಿವೆ. ಆದರೂ ಆರ್ಥಿಕವಾಗಿ ಸಾಲ ಕೊಡುವುದು, ಗ್ಯಾರಂಟಿ ಕೊಡುವುದು ಮಾಡದಿರಿ. ಸಾಂಸಾರಿಕವಾಗಿ ಹೆಂಡತಿಯಿಂದ ಸಹಕಾರವು ಸಿಗಲಿದೆ.

ಮಿಥುನ (Mithuna)


ಮಕ್ಕಳಿಂದ ಸಂತಸದ ವಾತಾವರಣ. ಅವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳಿಗೆ ಅಡಚಣೆಗಳು ತೋರಿ ಬರಲಿವೆ, ದಿನಾಂತ್ಯ ಶುಭ.

ಕರ್ಕ (Karka)


ಆಕರ್ಷಕವಾದ ದುಡಿಮೆಗೆ ಅವಕಾಶವಿದೆ. ನಿರುದ್ಯೋಗಿಗಳಿಗೆ ಸಕಾಲ. ರೈತಾಪಿಜನ ವರ್ಗಕ್ಕೆ ಸದ್ಯದಲ್ಲೇ ಸಂತಸದ ವಾತಾವರಣ. ಕಾರ್ಮಿಕ ವರ್ಗದವರಿಗೆ ವರ್ಗಾವಣೆ ಸಾಧ್ಯತೆ ತೋರಿ ಬಂದೀತು.

ಸಿಂಹ (Simha)


ಹೊಸ ಯೋಜನೆ ಹಣ ನೀಡಲಿದೆ. ಬಂಧುಗಳಲ್ಲಿ ಧರ್ಮಕಾರ್ಯ ಯಾ ಪ್ರಾಯಶ್ಚಿತ್ತದ ಕೆಲಸ ನಡೆಯಬಹುದು. ಕಾರ್ಮಿಕರ ಅಲ್ಲಕ್ಷ್ಯದಿಂದ ದಂಡ ತೆರಬೇಕಾದ ಪರಿಸ್ಥಿತಿ ಬಂದೀತು. ದಿನಾಂತ್ಯ ಶುಭ.

ಕನ್ಯಾರಾಶಿ (Kanya)


ನಿರುದ್ಯೋಗಿಗಳಿಗೆ ಉದ್ಯೋಗದ ಸಮಸ್ಯೆ ಕಂಡು ಬರಲಿದೆ. ಮಕ್ಕಳ ಆರೋಗ್ಯ ಆಗಾಗ ಕೆಡಲಿದೆ. ಕೆಲಸಕಾರ್ಯಗಳಲ್ಲಿ ಹಣಕ್ಕಾಗಿ ತಪ ತಸಿಸುವಿರಿ. ವಿದೇಶ ಸಂಚಾರದ ಯೋಗವು ರದ್ದಾಗಲಿದೆ.

ತುಲಾ (Tula)


ಖರ್ಚುವೆಚ್ಚ ನಿಮ್ಮ ಅರ್ಥಿಕ ಪರಿಸ್ಥಿತಿಯನ್ನು ಏರುಪೇರು ಮಾಡಿದರೂ ಧನಾಗಮನಕ್ಕೆ ಸಮಸ್ಯೆ ಬಾರದು. ಮಹತ್ವದ ಕೆಲಸಕಾರ್ಯಗಳ ಬಗ್ಗೆ ಹಿರಿಯರೊಡನೆ ಭಿನ್ನಾಭಿಪ್ರಾಯದ ಸಾಧ್ಯತೆ ಇದೆ.

ವೃಶ್ಚಿಕ (Vrushchika)


ಬಂಧುಗಳ ಬಗ್ಗೆ ಜಾಗ್ರತೆ ವಹಿಸಿರಿ. ಶುಭ ಮಂಗಲ ಕಾರ್ಯಗಳು ಭರದಿಂದ ನಡೆಯಲಿವೆ. ದಾಯಾದಿಗಳ ಚಾಡಿ ಮಾತು ಮನಸ್ಸನ್ನು ನೋಯಿಸಲಿದೆ. ಮನೆಯಲ್ಲಿ ಗೃಹಿಣಿಯ ಆಕಾಂಕ್ಷೆಯ ಬಗ್ಗೆ ಗಮನವಿರಲಿ.

ಧನು ರಾಶಿ (Dhanu)


ಯೋಗ್ಯ ವಯಸ್ಕರ ಮದುವೆಯ ಮಾತುಕತೆ, ಮಂಗಲಕಾರ್ಯ, ದೇವತಾಧಿಕಾರ್ಯಗಳಿಗೆ ಸಕಾಲ. ಗುಟ್ಟು ರಟ್ಟಾದರೂ ಲಾಭವಿದೆ. ಆರ್ಥಿಕವಾಗಿ ಲೆಕ್ಕಾಚಾರ ಸರಿಯಾಗಿರಲಿ. ಅತಿಥಿಗಳ ಆಗಮನ.

ಮಕರ (Makara)


ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳಿಗೆ ದೂರ ಪ್ರಯಾಣ. ಆಗಾಗ ಆರೋಗ್ಯದಲ್ಲಿ ಹೊಟ್ಟೆ ಸಮಸ್ಯೆ ಕಾಣಬಹುದು. ಕಲ್ಲು ಮಣ್ಣುಗಳ ವ್ಯವಹಾರದಲ್ಲಿ ಚೇತರಿಕೆ ಕಂಡು ಬರದಂತೆ. ಕೋರ್ಟು ಅಲೆದಾಟ ಕಡಿಮೆಯಾಗಲಿದೆ.

ಕುಂಭರಾಶಿ (Kumbha)


ಆರೋಗ್ಯದಲ್ಲಿ ಉದಾಸೀನತೆ ಅನಾರೋಗ್ಯಕ್ಕೆ ಕಾರಣವಾದೀತು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ ಪಡೆಯಲು ಶ್ರಮಪಡಬೇಕು. ಹಿರಿಯರಿಗೆ ಸಂಚಾರದಲ್ಲಿ ಯೋಗವಿದೆ.

ಮೀನರಾಶಿ (Meena)


ರಾಜಕೀಯದಲ್ಲಿ ಮುನ್ನಡೆ. ಸಾಕಷ್ಟು ಧನ್ಯವ್ಯಯವಾದರೂ ಕಾರ್ಯಸಿದ್ಧಿ ಇದೆ. ಮೇಲಧಿಕಾರಿಗಳಿಗೆ ಮುಂಭಡ್ತಿ ಯೋಗ. ವಾಹನ ಭೂ ಖರೀದಿಗೆ ಇದು ಸಕಾಲ. ಶ್ರೀದೇವತಾದರ್ಶನ ಭಾಗ್ಯವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top