ಸಮಾಚಾರ

ಹುಬ್ಬಳ್ಳಿ ಬದಲು ಮೈಸೂರಿನಲ್ಲಿ ನಡೆಯಲಿದೆ ಸೀತಾರಾಮನ ಕಲ್ಯಾಣ .

ಎ ಹರ್ಷ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ಅಭಿನಯದ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಸೀತಾರಾಮ ಕಲ್ಯಾಣ’ ಇದೆ ತಿಂಗಳು 25 ಕ್ಕೆ ತೆರೆಗೆ ಬರಲು ಸಜ್ಜಾಗಿದ್ದು, ಈ ಚಿತ್ರದ ಪ್ರೀ – ರಿಲೀಸ್ ಇವೆಂಟ್ ಅನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು ಆದರೆ ಕಾರಣಾಂತರಗಳಿಂದ ಹುಬ್ಬಳ್ಳಿಯಲ್ಲಿ ಪ್ರೀ -ರಿಲೀಸ್ ಇವೆಂಟ್ ಮಾಡುವ ನಿರ್ಧಾರವನ್ನು ಚಿತ್ರತಂಡ ಕೈ ಬಿಟ್ಟಿದ್ದು ಇದೀಗ ಸೀತಾರಾಮ ಕಲ್ಯಾಣ ಚಿತ್ರದ ಪ್ರೀ – ರಿಲೀಸ್ ಇವೆಂಟ್ ಅನ್ನು ಇದೇ ತಿಂಗಳ 19 ನೆ ತಾರೀಕಿನಂದು ಮೈಸೂರಿನಲ್ಲಿ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಹರ್ಷ ” 19ಕ್ಕೆ ಮೈಸೂರಿನಲ್ಲಿ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ ಇದೆ. ‘ಚಿತ್ರ ಬಿಡುಗಡೆಗೂ ಮುನ್ನ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿಯೇ ಸಿನಿಮಾದ ಟ್ರೇಲರ್‌ ಸಹ ಲಾಂಚ್‌ ಆಗುತ್ತದೆ. ಈಗ ಬಿಡುಗಡೆಯಾಗಿದ್ದ ಮೊದಲ ಟೀಸರ್‌ ಕಂಪ್ಲೀಟ್‌ ಆ್ಯಕ್ಷನ್‌ ಮಯವಾಗಿತ್ತು. ಈಗ ಬಿಡುಗಡೆಯಾಗುತ್ತಿರುವ ಟ್ರೇಲರ್‌ನಲ್ಲಿ ಸಿನಿಮಾದ ಬಗ್ಗೆ ಸಣ್ಣ ಮಾಹಿತಿ ಇರುತ್ತದಂತೆ. ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಪ್ಯಾಕೇಜ್‌ ಎಂಬುದು ಈ ಟ್ರೇಲರ್‌ನಲ್ಲಿ ಗೊತ್ತಾಗುತ್ತದೆ” ಎಂದಿದ್ದಾರೆ.

ಆಷ್ಟಕ್ಕೂ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ಪ್ರೀ ರಿಲೀಸ್ ಇವೆಂಟ್ ಅನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವುದರ ಹಿಂದೆ ಕಾರಣಗಳಿದ್ದು. ನಿಖಿಲ್ ಕುಮಾರಸ್ವಾಮಿ ಸಿಎಂ ಪುತ್ರನಾಗಿದ್ದು, ಹೆಚ್ಚಾಗಿ ಸಿಎಂ ರವರ ಜನಪ್ರಿಯತೆ ಅಧಿಕವಾಗಿರೋದು ಮೈಸೂರು, ಮಂಡ್ಯ, ರಾಮನಗರ ಭಾಗದಲ್ಲೇ ಹಾಗಾಗಿ ಹುಬ್ಬಳ್ಳಿಯಲ್ಲಿ ಮಾಡುವ ಬದಲು ತಮ್ಮ ಊರಿನ ಅಭಿಮಾನಿಗಳ ಮುಂದೆ ಈ ಕಾರ್ಯಕ್ರಮವನ್ನ ಆಯೋಜಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಯಿತಂತೆ.

ಒಟ್ಟಿನಲ್ಲಿ ಎ. ಹರ್ಷ ನಿರ್ದೇಶನದ ಚಿನ್ನಾಂಬಿಕಾ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿಯನ್ನು ಜಯಣ್ಣ ಕಂಬೈನ್ಸ್​ ವಹಿಸಿಕೊಂಡಿದೆ. ಇನ್ನೂ ಈ ಸಿನಿಮಾದಲ್ಲಿ ಅನೂಪ್ ರೂಬೆನ್ಸ್ ಸಂಗೀತ ಸಂಯೋಜನೆ, ಜೆ ಸ್ವಾಮಿ ಛಾಯಾಗ್ರಾಹಣವಿರಲಿದೆ.ಹಾಗೂ ನಿಖಿಲ್, ರಚಿತಾರಾಮ್ ಜೊತೆಗೆ ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಆದಿತ್ಯ ಮೆನನ್, ಜ್ಯೋತಿ ರೈ, ನಯನ, ಶಿವರಾಜ್ ಕೆ.ಆರ್ ಪೇಟೆ, ಜೀವನ್, ವೀಣಾ ಪೊನ್ನಪ್ಪ, ರವಿ ಭಟ್, ಸವಿತಾ, ಗಿರೀಶ್ ಜತ್ತಿ, ಹರೀಶ್, ಸಂಜು ಬಸ್ಯ ಸೇರಿದಂತೆ ಇನ್ನೂ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top