fbpx
ಸಮಾಚಾರ

ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ- ಆರೋಪಕ್ಕೆ ನಿರ್ದೇಶಕ ಹೇಳಿದ್ದೇನು?

ಇತ್ತೀಚಿಗೆ ಇಡೀ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಮೀಟೂ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುನ್ನಾಭಾಯಿ ಎಂಬಿಬಿಎಸ್, 3 ಈಡಿಯೆಟ್ಸ್, ಪಿಕೆ, ಸಂಜು ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ರಾಜ್ ಕುಮಾರ್ ಹಿರಾನಿ ವಿರುದ್ಧ ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಸಂಜಯ್​ ದತ್ ಜೀವನಾಧರಿತ ಚಿತ್ರ ‘ಸಂಜು’ ಚಿತ್ರೀಕರಣದ ವೇಳೆ ನಿರ್ದೇಶಕ ರಾಜ್​ಕುಮಾರ್ ಹಿರಾನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂಜು ಚಿತ್ರದಲ್ಲಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.

ಸಿನಿಮಾದಲ್ಲಿ ಕೆಲಸ ಮಾಡಿದ್ದಈಕೆ ತನ್ನ ಮೇಲೆ ರಾಜ್​ ಕುಮಾರ್​ ಹಿರಾನಿ 6 ತಿಂಗಳಿಗೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಇಮೇಲ್​ನಲ್ಲಿ ಆರೋಪಿದ್ದಾರೆ. ಸಂಜು ಸಿನಿಮಾದ ಸಹ ನಿರ್ಮಾಪಕ ವಿಧು ವಿನೋದ್​ ಚೋಪ್ರಾ ಅವರಿಗೆ ಮೇಲ್ ಮಾಡುವ ಮೂಲಕ ಆರೋಪಿಸಿದ್ದಾರೆ. ಚಿತ್ರದ ಸಹ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಹಾಗೂ ಅವರ ಪತ್ನಿ ಅನುಪಮಾ ಚೋಪ್ರಾಗೆ 2018ರ ನವೆಂಬರ್​ 3ರಂದು ಕಳಿಸಿದ್ದ ಇಮೇಲ್​ ಈಗ ಬಹಿರಂಗವಾಗಿದೆ.

ಈ ಆರೋಪವನ್ನು ತಳ್ಳಿಹಾಕಿರುವ ರಾಜ್​ಕುಮಾರ್​ ಹಿರಾನಿ “ತನ್ನ ವಿರುದ್ಧದ ಆರೋಪಗಳು ಸುಳ್ಳು ಹಾಗು ವೈಯಕ್ತಿಕ ದ್ವೇಷದಿಂದ ನನ್ನ ತೇಜೋವಧೆ ಮಾಡಲು ಸಂಚು ರೂಪಿಸಲಾಗಿದೆ” ಎಂದು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top