ಸಮಾಚಾರ

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಹಿಂದೂ ಮಹಿಳೆ!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವುದಾಗಿ ಭಾರತೀಯ ಮೂಲದ ಸಂಸದೆ ತುಳಸಿ ಗಬ್ಬಾರ್ಡ್‌ ತಿಳಿಸಿದ್ದಾರೆ. ಸದ್ಯ ಹವಾಯಿಯ ಅಮೆರಿಕನ್ ಪ್ರತಿನಿಧಿಯಾಗಿರುವ ತುಳಸಿ, ಇರಾಕ್ ಯುದ್ಧದಲ್ಲಿ ಅಮೆರಿಕನ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಸ್ಪರ್ಧೆ ಬಗ್ಗೆ ಮುಂದಿನ ವಾರದಲ್ಲಿ ಅಧಿಕೃತ ಘೋಷಣೆ ಮಾಡೋದಾಗಿ ತಿಳಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌(ಕೆಳಮನೆ)ಗೆ ಆಯ್ಕೆಯಾದ ಪ್ರಥಮ ಹಿಂದೂ ಮಹಿಳೆ ಎಂಬ ಹಿರಿಮೆ ಹೊಂದಿರುವ ಗಬ್ಬಾರ್ಡ್‌ ನಾಲ್ಕನೇ ಬಾರಿ ಸಂಸದೆಯಾಗಿರುವ ತುಳಸಿ ಅವರು, ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಡೆಮಾಕ್ರಟಿಕ್‌ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಸೇರಿದಂತೆ ಟ್ರಂಪ್‌ ವಿರುದ್ಧ ಅಖಾಡಕ್ಕೆ ಇಳಿಯಲು 12ಕ್ಕೂ ಹೆಚ್ಚು ನಾಯಕರು ಉತ್ಸಾಹ ತೋರಿಸಿದ್ದಾರೆ.

ಇನ್ನು ಹ್ಯಾರೀಸ್ ತಾಯಿ ಭಾರತೀಯ ಮೂಲದವರಾಗಿದ್ದರೆ ತಂದೆ ಆಫ್ರಿಕನ್ ರಾಷ್ಟ್ರದವರಾಗಿದ್ದಾರೆ. ಆದರೆ ಹ್ಯಾರೀಸ್ ತಮ್ಮನ್ನು ಆಫ್ರಿಕನ್ ಎಂದು ಕರೆದುಕೊಳ್ಳುವ ಕಾರಣ ಅಮೆರಿಕದಲ್ಲಿನ ಭಾರತೀಯರಿಗೆ ಆಕೆಯ ಬಗ್ಗೆ ಅಸಮಾಧಾನವಿದೆ. ಇದೀಗ ಹ್ಯಾರೀಸ್ ಎದುರು ತುಳಸಿ ಅವರು ಸ್ಪರ್ಧಿಸುತ್ತಾರೆ ಎಂದಾದರೆ ಭಾರತೀಯರ ಭಾರೀ ಬೆಂಬಲ ಸಿಗುವ ನಿರೀಕ್ಷೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top