fbpx
ಸಮಾಚಾರ

ರಿಲೀಸ್ ಆಯ್ತು ನೋಡಿ ರಾಘಣ್ಣನ ಕಮ್‌ಬ್ಯಾಕ್ ಸಿನಿಮಾ “ಅಮ್ಮನ ಮನೆ” ಟೀಸರ್.

ಮನೋಜ್ಞ ನಟನೆಯ ಮೂಲಕವೇ ಕರ್ನಾಟಕದ ಸಿನಿರಸಿಕರ ಮನದಲ್ಲಿ ಮನೆ ಮಾಡಿರುವವ ರಾಘವೇಂದ್ರ ರಾಜಕುಮಾರ್ ಅವರ ಕಮ್ ಬ್ಯಾಕ್ ಸಿನಿಮಾದ ಟೀಸರ್ ಟೀಸರ್ ಬಿಡುಗಡೆಯಾಗಿದೆ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿದ್ದರೂ ಆರೋಗ್ಯ ಕೈಕೊಟ್ಟ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ನಟನೆಯಿಂದ ಸುಮಾರು ಒಂದೂವರೆ ದಶಕಗಳ ದೂರ ಉಳಿದಿದ್ದರು. ಆದರೆ ಇದೀಗ ಅವರು ತಮ್ಮ ನೆಚ್ಚಿನ ನಟನಾ ಕ್ಷೇತ್ರಕ್ಕೆ ರೀ ಎಂಟ್ರಿ ಕೊಡುತ್ತಿದ್ದು ರಾಘಣ್ಣನ ಕಂಬ್ಯಾಕ್ ಗಾಗಿ ಕಾದು ಕುಳಿತಿದ್ದ ದೊಡ್ಮನೆ ಅಭಿಮಾನಿಗಳಿಗೆ ಮಾತ್ರವಲ್ಲದೆ ಪ್ರತಿ ಕನ್ನಡ ಸಿನಿರಸಿಕನಿಗೂ ಸಂತಸವನ್ನುಂಟುಮಾಡಿದೆ.

ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿರುವ ‘ಅಮ್ಮನ ಮನೆ’ ಚಿತ್ರದಲ್ಲಿ ಸದ್ಯ ರಾಘವೇಂದ್ರ ರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದೆ.. ಇಂದು ಚಿತ್ರದ ಟೀಸರ್ ರಿಲೀಸ್ ಆಗಿದ್ದು ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಿದೆ. ಕಲಾವಿದರ ಸಂಘದಲ್ಲಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

ಅಮ್ಮನಿಗೆ ಅನಾರೋಗ್ಯ ಉಂಟಾದಾಗ ಮಗ ಹೇಗೆ ಅಮ್ಮನ ಆರೈಕೆ ಮಾಡುತ್ತಾನೆ ಅನ್ನೋದೆ ಸಿನಿಮಾದ ಕಥೆ. ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ನಲ್ಲಿ ಆತ್ಮಶ್ರೀ ಮತ್ತು ಆರ್​​.ಎಸ್​​​. ಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.. ಉಳಿದಂತೆ ಸಮೀರ್ ಕುಲಕರ್ಣಿ ಅವರ ಸಂಗೀತ ಸಂಯೋಜನೆ ಮತ್ತು ಪಿವಿಆರ್ ಸ್ವಾಮಿ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top