ಸಮಾಚಾರ

“ನಾನು ಈ ಸಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ದಯವಿಟ್ಟು ಒತ್ತಾಯ ಮಾಡಬೇಡಿ.” – ನಟ ದರ್ಶನ್

ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದ ನೊಂದಿದ್ದ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬನವನು ಈ ಬಾರಿ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅದರಂತೆ ಯಾವುದೇ ಆಚರಣೆಗಳಲ್ಲೂ ಯಶ್ ಭಾಗಿಯಾಗಲಿಲ್ಲ. ಇದೀಗ ಸ್ಯಾಂಡಲ್ ವುಡ್ ನ ಇನ್ನೊಬ್ಬ ಸೂಪರ್ ಸ್ಟಾರ್ ನಟ ಈ ಸಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ಈ ಸಾರಿ ನಾನು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ನಟ ಬೇರೆಯಾರು ಅಲ್ಲಾ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ . ಹೌದು, ದರ್ಶನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ಯಾರೇ ಕೇಕ್ ತಂದರೂ ಕೇಕ್ ಕತ್ತರಿಸುವುದಿಲ್ಲ. ‘ದಯವಿಟ್ಟು ಒತ್ತಾಯ ಮಾಡಬೇಡಿ. ಇದೊಂದು ವರ್ಷ ನನ್ನನ್ನು ಬಿಟ್ಟು ಬಿಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ದರ್ಶನ್.

ದರ್ಶನ್ ಏಕೆ ತಾವು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. ಆದರೆ ಅಂಬಿ ಮತ್ತು ದರ್ಶನ್ ರವರ ನಡುವಿದ್ದ ನಿಕಟ ಸಂಬಂಧದ ಬಗ್ಗೆ ಎಲ್ಲರಿಗು ತಿಳಿದಿದ್ದು , ಅಂಬಿಯ ಅಗಲಿಕೆಯಿಂದ ನೊಂದಿರುವ ದರ್ಶನ್ ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತಿಲ್ಲ ಎಂದು ತಿಳಿದು ಬಂದಿದೆ.

 

ಒಟ್ಟಿನಲ್ಲಿ ದರ್ಶನ್ ಈ ಸಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂಬುವ ಸಂಗತಿ ಅವರ ಅಭಿಮಾನಿಗಳಿಗೆ ಬೇಸರ ತಂದಿದ್ದು. ಮುಂದಿನ ದಿನಗಳಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ದರ್ಶನ್ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾರೋ ಅಥವಾ ತಾವು ತೆಗೆದುಕೊಂಡಿರುವ ನಿಲುವಿಗೆ ಬದ್ಧರಾಗಿರುತ್ತಾರೋ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top