ಸಮಾಚಾರ

ದರ್ಶನ್, ಸುದೀಪ್, ಯಶ್ ರನ್ನು ಹಾಡಿ ಹೊಗಳಿದ ಸ್ಯಾಂಡಲ್ ವುಡ್ ಬ್ಯುಟಿ ಹರ್ಷಿಕಾ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಹರ್ಷಿಕಾ ಪೂಣಚ್ಚ ಒಂದಲ್ಲ ಒಂದು ಪೋಸ್ಟ್ ಅನ್ನು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತಿರುತ್ತಾರೆ. ಇದೀಗ ಎಂದಿಂದತೆ ಸಾಮಾಜಿಕ ತಾಣಗಳಲ್ಲಿ ಕನ್ನಡಲ್ಲಿ ಪೋಸ್ಟ್ ಗಳನ್ನೂ ಅಪ್ಲೋಡ್ ಮಾಡಿರುವ ನಟಿ ಹರ್ಷಿಕಾ ಅದರಲ್ಲಿ ಸೂಪರ್ ಸ್ಟಾರ್ ಗಳಾದ ದರ್ಶನ್, ಸುದೀಪ್ ಮತ್ತು ಯಶ್ ರನ್ನು ಪ್ರತ್ಯೇಕವಾಗಿ ಹಾಡಿ ಹೊಗಳಿದ್ದಾರೆ.

“ನನ್ನ ಕನ್ನಡ ಬಳಕೆಗೆ ಹಾಗು ಬರವಣಿಗೆಗೆ ತುಂಬ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ ಒಂದು ಕನ್ನಡ ಚಾಟ್ ಮಾಡೋಣವೇ ? ನೀವು ಕನ್ನಡದಲ್ಲಿ ಪ್ರಶ್ನೆ ಕೇಳಿ(ಬರೆಯಿರಿ),ನಾನು ಕನ್ನಡದಲ್ಲಿ ಉತ್ತರಿಸುವೆ, ಬರೆಯುವೆ” ಎಂದು ಹರ್ಷಿಕಾರವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರೂ. ಇದನ್ನು ನೋಡಿದ ಅಭಿಮಾನಿಗಳು ಹರ್ಷಿಕಾಗೆ ಪ್ರಶ್ನೆಗಳನ್ನು ಸುರಿಮಳೆಗೈದಿದ್ದಾರೆ ಮತ್ತು ಇದಕ್ಕೆ ಹರ್ಷಿಕಾ ಪ್ರತ್ಯುತ್ತರ ಸಹ ನೀಡಿದ್ದಾರೆ.

ದರ್ಶನ ಸರ್ ಎತ್ತರದ ಆಕಾಶ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಯೊಬ್ಬರೂ ದರ್ಶನ್ ಸರ್ ಬಗ್ಗೆ ಹೇಳಿ ಎಂದಿದ್ದಕ್ಕೆ, ‘ದರ್ಶನ ಸರ್ ಎತ್ತರದ ಆಕಾಶದಂತೆ ! ಆಕಾಶ ತಂಪಾದ ಮಳೆ ನೀಡುತ್ತೆ, ಎಲ್ಲರನ್ನು ಖುಷಿ ಪಡಿಸುತ್ತೆ, ಹಾಗೆ ಕೆಣಕಿದರೆ ಗುಡುಗು ಸಿಡಿಲಿನಿಂದ ಸುಡುತ್ತೆ ’ ಎಂದು ಉತ್ತರ ಕೊಟ್ಟಿದ್ದಾರೆ.

 

 

ಸುದೀಪ್ ಸರ್ ನಮ್ಮ ಕಿಚ್ಚ ! 

ನಮ್ಮ ಕಿಚ್ಚಾ ಸುದೀಪ್​ ಅಣ್ಣನ ಬಗ್ಗೆ ಎರಡು ಮಾತನಾಡಿ ಎಂದು ಕಿಚ್ಚನ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ , ‘ಸುದೀಪ್ ಸರ್ ನಮ್ಮ ಕಿಚ್ಚ! ಅವರು ಬೆಂಕಿ ಇದ್ದ ಹಾಗೆ, ಅವರನ್ನ ಪ್ರೀತಿಯಿಂದ ಮುಟ್ಟಿದರೆ ದೀಪ, ಕೆಟ್ಟ ಉದ್ದೇಶದಿಂದ ಮುಟ್ಟಿದವರು ಭಸ್ಮ’ ಎಂದು ಬರೆದಿದ್ದಾರೆ.

 

 

ರಾಕಿಂಗ್ ಸ್ಟಾರ್, ಕಲ್ಲಿನ ಬೆಟ್ಟ !

ಇನ್ನೂ ನಮ್ಮ ಯಶ್ ಬಾಸ್ ಬಗ್ಗೆ ಎರಡು ಮಾತು ಹೇಳಿ? ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಹರ್ಷಿಕಾ ಅವರು ರಾಕಿಂಗ್ ಸ್ಟಾರ್, ಕಲ್ಲಿನ ಬೆಟ್ಟದ ಹಾಗೆ ! ಬೆಟ್ಟಾನ ಯಾರಾದ್ರೂ ಅಲ್ಲಾಡಿಸೋಕೆ ಆಗತ್ತಾ ??? #ಸಲಾಂರಾಕಿಭಾಯೀ ಎಂದು ಉತ್ತರಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top