ಸಮಾಚಾರ

ಗೌರಿ ಲಂಕೇಶ್ ಪಾತ್ರ ಮಾಡ್ತಿದ್ದಾಳಾ ಕಾನ್ಸ್ಟೆಬಲ್ ಸರೋಜಾ? ಮಿ. ನಟ್ವರ್​ಲಾಲ್​ ವಿರುದ್ಧ ಸಿಡಿದೆದ್ದ ಕವಿತಾ ಲಂಕೇಶ್.

ತಮ್ಮ ಸಹೋದರಿ ಗೌರಿ ಲಂಕೇಶ್​ ಹತ್ಯೆ ವಿಚಾರವನ್ನು ಯಾವುದೇ ಸಿನಿಮಾದಲ್ಲಿ ಬಳಸಿಕೊಳ್ಳಬಾರದು ಎಂದು ಕವಿತಾ ಲಂಕೇಶ್​ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.

ಮಿ.ನಟ್ವರ್ಲಾಲ್‌ ಸಿನಿಮಾದಲ್ಲಿ ಗೌರಿ ಹತ್ಯೆಯ ಕುರಿತಾದ ಸನ್ನಿವೇಶವಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆ ಕಾರಣಕ್ಕಾಗಿ ಗೌರಿ ಸಹೋದರಿ ಕವಿತಾ ಲಂಕೇಶ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಈ ಕೇಸ್‌ ಕೋರ್ಟ್‌ನಲ್ಲಿ ಇರುವ ಕಾರಣಕ್ಕಾಗಿ ಸಿನಿಮಾದಲ್ಲಿ ಗೌರಿ ಹತ್ಯೆಯ ದೃಶ್ಯಗಳನ್ನು ಬಳಸುವಂತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

 

ಲವ ನಿರ್ದೇಶನದ ಮಿ.ನಟ್ವರ್ ಲಾಲ್ ಎಂಬ ಚಿತ್ರದಲ್ಲಿ ಟಗರು ಸರೋಜಾ ಖ್ಯಾತಿಯ ತ್ರಿವೇಣಿ ಗೌರಿ ಲಂಕೇಶ್ ಪಾತ್ರ ನಿರ್ವಹಿಸುತ್ತಿದ್ದಾರೆಂಬ ಗಾಸಿಪ್ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು. ಇದನ್ನು ಗಮನಿಸಿರುವ ಕವಿತಾ ಲಂಕೇಶ್ ತಮ್ಮ ಅಕ್ಕನ ಹತ್ಯೆಯ ಬಗ್ಗೆ, ಗೌರಿಯವರ ಬಗ್ಗೆ ಯಾವುದೇ ವಿಚಾರವನ್ನು ಬಳಸಿಕೊಳ್ಳದಂತೆ ತಡೆ ಹಿಡಿಯುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ದೇಶಕ ಲವ “ಸಿನಿಮಾದಲ್ಲಿ ಗೌರಿ ಹತ್ಯೆ ಕುರಿತಾದ ಯಾವುದೇ ಸನ್ನಿವೇಶಗಳಿಲ್ಲ. ಗೌರಿ ಅವರ ಬಗ್ಗೆ ನನಗೂ ಅಪಾರವಾದ ಗೌರವವಿದೆ. ಅವರ ಬಗ್ಗೆ ನಾನೂ ತಿಳಿದುಕೊಂಡಿದ್ದೇನೆ. ಅವರ ಬರಹವನ್ನೂ ಓದಿದ್ದೇನೆ. ಸಿನಿಮಾಗೂ ಗೌರಿ ಹತ್ಯೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ಗೊಂದಲ ಇರಬಾರದು”ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top