fbpx
ಮನೋರಂಜನೆ

ಬಿಡುಗಡೆಗೊಂಡ ನಟ ಅನೀಶ್ ಅಭಿನಯದ ‘ ರಾಮಾರ್ಜುನ ‘ ಸಿನಿಮಾ ಟೀಸರ್ – ಇದು ಪಕ್ಕಾ ಮಾಸ್ ಫಿಲಂ ಅಂತಿದಾರೆ ಅಭಿಮಾನಿಗಳು !

ಕಾಫಿ ವಿತ್ ಮೈ ವೈಫ್​​, ಅಕಿರಾ, ವಾಸು ಪಕ್ಕಾ ಕಮರ್ಷಿಯಲ್​ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ನಟ ಅನೀಶ್ ತೇಜೇಶ್ವರ್ ಸುರದ್ರೂಪಿ ಮತ್ತು ಸಭ್ಯ ನಟ ಎಂದೇ ಸ್ಯಾಂಡಲ್ ವುಡ್ ನಲ್ಲಿ ಹೆಸರು ಗಳಿಸಿದ್ದಾರೆ.

ಇದೀಗ ನಟ ಅನೀಶ್ ತೇಜೇಶ್ವರ್ ಅಭಿನಯದ ಹೊಸ ಚಲನಚಿತ್ರದ ಟ್ರೈಲರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು , ಅವರ ಅಭಿಮಾನಿಗಳಿಗಂತೂ ಈ ಟ್ರೈಲರ್ ಖುಷಿ ಕೊಟ್ಟಿದೆ.

ಅಂದಹಾಗೆ ನಟ ಅನೀಶ್ ತೇಜೇಶ್ವರ್ ಅಭಿನಯಿಸಿರುವ ಈ ಚಿತ್ರಕ್ಕೆ ‘ ರಾಮಾರ್ಜುನ ‘ ಎಂಬ ಹೆಸರನ್ನು ಇಡಲಾಗಿದೆ.

ಸದ್ಯ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೈಲರ್ ಸಿನಿ ಪ್ರೇಮಿಗಳಿಂದ ಭಾರಿ ಪ್ರಶಂಸೆಗೆ ಒಳಗಾಗಿದೆ.

ರಾಮಾರ್ಜುನ ಸಿನಿಮಾ ಪಕ್ಕಾ ಮಾಸ್ ಸಿನಿಮಾವಾಗಿದ್ದು ಟ್ರೈಲರ್ ಮೂಲಕ ಪ್ರೇಕ್ಷಕರ ಗಮನವನ್ನು ತನ್ನತ್ತ ಭಾರಿ ಪ್ರಮಾಣದಲ್ಲೇ ಸೆಳೆದುಕೊಂಡಿದೆ.

ಚಿತ್ರದಲ್ಲಿ ನಿಷ್ವಿಕ ನಾಯ್ಡು ನಾಯ್ಡು ನಾಯಕಿಯಾಗಿ ನಟಿಸಿದ್ದು, ಚಿತ್ರವನ್ನು ಸ್ವತಃ ಅನಿಶ್ ನಿರ್ದೇಶಿಸುತ್ತಿದ್ದು . ನಿರ್ಮಾಣದ ಜವಾಬ್ದಾರಿಯನ್ನು ಆವರೇ ವಹಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇರುವುದಂತೂ ಸುಳ್ಳಲ್ಲ. ಹಾಗೇ ಈ ಚಿತ್ರದ ಮೂಲಕ ನಟ ಅನೀಶ್ ತೇಜೇಶ್ವರ್ ಅವರಿಗೆ ದೊಡ್ಡದೊಂದು ಬ್ರೇಕ್ ಸಿಗಲಿದೆ ಎಂದು ಗಾಂಧಿನಗರದಲ್ಲಿ ಹೇಳಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top