fbpx
ಸಮಾಚಾರ

20 ಮಂದಿ ಬಡ ಭೂರಹಿತ ಬಡವರಿಗೆ ತನ್ನ ಆಸ್ತಿಯನ್ನೇ ದಾನ ಮಾಡಿದ ಯುವ ರಾಜಕಾರಣಿ.

ರಾಜಕಾರಣಿಗಳೆಂದರೆ ಕೇವಲ ಅಧಿರಕ್ಕಾಗಿ ಕಿತ್ತಾಡೋದು, ಸುಳ್ಳು ಭರವಸೆಗಳನ್ನು ನೀಡೋದು, ಜನರ ಹಣ, ಸಂಪತ್ತನ್ನು ಲೂಟಿ ಮಾಡೋದು, ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವುದೇ ಕೆಲಸ ಎಂಬುದೇ ಬಹುತೇಕರ ಅಭಿಪ್ರಾಯವಾಗಿದೆ.. ಆದರೆ ಇಂಥಾ ಕೊಳಕು ರಾಜಕಾರಣಿಗಳ ಮದ್ಯೆಯಲ್ಲೂ ಕೆಲವೊಬ್ಬ ಉತ್ತಮ ನಾಯಕರು ನಮ್ಮ ನಡುವೆ ಇರುತ್ತಾರೆ.

ಇಂಥಾ ಒಳ್ಳೆಯ ರಾಜಕಾರಣಿಗಳಲ್ಲಿ ಕೇರಳದ ಯುವ ರಾಜಕಾರಣಿಗೂ ಒಂದು ಸ್ಥಾನ ನೀಡಬೇಕು ಎನಿಸುತ್ತದೆ. ಏಕೆಂದರೆ ಕೇರಳದ ಯುವ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಿತ್ರಾರ್ಜಿತ ಆಸ್ತಿಯಾದ 1 ಎಕರೆ 10 ಸೆಂಟ್ ಭೂಮಿಯನ್ನು ಭೂ ರಹಿತರಿಗೆ ದಾನವಾಗಿ ನೀಡಿದ್ದಾರೆ. ಯುತ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ನಿಯಾಜ್ ಚಿತಾರ 20 ಫಲಾನುಭವಿಗಳಿಗೆ 4 ಸೆಂಟ್ಸ್ ಭೂಮಿಯನ್ನು ನೋಂದಣಿ ಮಾಡಿಕೊಟ್ಟಿದ್ದಾರೆ.

ಮನೆಯಿಲ್ಲದ ಸುಮಾರು ಸಾವಿರಾರು ಮಂದಿ ಇದ್ದಾರೆ, ನಾನು ಚಿತಾರ ಮತ್ತು ಮಂಗೋಡ್ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ, ಅವಶ್ಯಕತೆ ಇರುವವರ ಪಟ್ಟಿ ಪಡೆದು, ಅವರ ಜೊತೆ ಮಾತನಾಡಿ ಅ ನಂತರ 20 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ ವಿಧವೆಯರು. ದೈಹಿಕ ವಿಕಲಾಂಗರು, ಹಾಗೂ ರೋಗಗಳಿಂದ ನರಳುತ್ತಿರುವ ಅರ್ಹರನ್ನು ನಾನು ಆಯ್ಕ ಮಾಡಿದೆ, ಯಾವುದೇ ಶಿಪಾರಸ್ಸಿಗೊಳಗಾಗದೇ ನಾನೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ನಿಯಾಜ್ ಹೇಳಿದ್ದಾರೆ,

ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಂಡು ಸದ್ಯ ವಕೀಲ ವೃತ್ತಿ ಮುಂದುವರೆಸುತ್ತಿರುವ ನಿಯಾಜ್ ಗಾಂಧಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ, 2 ವರ್ಷದಲ್ಲಿ ಗಾಂದಿ ಗ್ರಾಮ ಕೆಲಸ ಪೂರ್ಣಗೊಳ್ಳಲಿದ್ದು, ಅಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ..

ಒಟ್ಟಿನಲ್ಲಿ ಅಂಗೈ ಜಾಗ ಸಿಕ್ಕರರೂ ಸರಿ ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಬಯಸುವ ಈಗಿನ ರಾಜಕಾರಣಿಗಳ ಮದ್ಯ ಧಾರಾಳ ಮನಸಿನ ನಿಯಾಜ್ ಅಂತವರೂ ಇನ್ನು ಮತ್ತಷ್ಟು ಜನ ಹುಟ್ಟಿಕೊಳ್ಳಲಿ ಎಂಬುದು ಎಲ್ಲರ ಬಯಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top