fbpx
ದೇವರು

ಸಂಕ್ರಾಂತಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದಂತೆ.

ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಮುಖ್ಯ ಹಬ್ಬವಾದ ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ .

ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ ಆದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದ್ದು, ಜನರು ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬರಲಿದ್ದು, ಈಗಾಗಲೇ ಎಲ್ಲರ ಮನೆಯಲ್ಲೂ ಅದಕ್ಕೆ ತಕ್ಕ ರೀತಿಯ ಸಿದ್ದತೆಗಳು ನಡೆಯುತ್ತಿದೆ.ಈ ನಡುವಲ್ಲಿ ಸಂಕ್ರಾಂತಿಯ ದಿನ ದಾನ ಮಾಡಿದರೆ ಒಳ್ಳೆಯದು ಎಂಬ ವಿಚಾರವನ್ನು ನಮ್ಮ ಶಾಸ್ತ್ರ-ಪುರಾಣಗಳು ಸಾರಿ ಹೇಳಿದ್ದು ಹೀಗಾಗಿ ಸಂಕ್ರಾಂತಿ ಹಬ್ಬದ ದಿನ ದಾನ ಮಾಡಿದರೆ ಶುಭಫಲಗಳು ದೊರೆಯುತ್ತದೆ.

ಹಾಗಾದರೆ ಯಾವ ವಸ್ತುಗಳನ್ಮು ಸಂಕ್ರಾಂತಿ ಹಬ್ಬದಂದು ದಾನ ಮಾಡಿದರೆ ಒಳ್ಳೆಯದಾಗುತ್ತದೆ ಗೊತ್ತೇ?

ಸಂಕ್ರಾಂತಿ ಹಬ್ಬದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವ ಬದಲೂ ಸೌಭಾಗ್ಯಕರ ವಸ್ತುಗಳಾದ ಅಗರಬತ್ತಿ, ದೇವತೆಗಳ ಚಿತ್ರ , ಧಾರ್ಮಿಕ ಗ್ರಂಥಗಳನ್ನು ಅಥವಾ ಸಾತ್ವಿಕ ವಸ್ತುಗಳನ್ನು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top