fbpx
ಆರೋಗ್ಯ

ನೀವು ದಿನದಲ್ಲಿ ಅತಿ ಹೆಚ್ಚು ಸಮಯವನ್ನು ಮೊಬೈಲ್ ಕರೆಯಲ್ಲೇ ಕಳೆಯುತ್ತೀರಾ? ಹಾಗಾದರೆ ಮಿಸ್ ಮಾಡದೇ ಈ ಲೇಖನ ಓದಿ.

ಮೊಬೈಲ್ ಮೊಬೈಲ್ ಈಗ ಎಲ್ಲೆಡೆ ಮೊಬೈಲ್ ನದ್ದೆ ಹಾವ. ಚಿಕ್ಕ ಮಕ್ಕಳ ಕೈ ನಿಂದಿಡಿದು ವಯಸ್ಸಾದ ಅಜ್ಜ ಅಜ್ಜಿ ಕೈನಲ್ಲೂ ಈಗ ಮೋಬೈಲ್ ಇದ್ದೇ ಇರುತ್ತದೆ. ದಿ‌ನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿರುವ
ಈ ಮೋಬೈಲ್. ಪ್ರತಿಯೊಬ್ಬರ ಸಂಗಾತಿಯಂತೆ ಆಗಿ ಹೋಗಿದೆ. ನಾವೆಲ್ಲರೂ ಮೋಬೈಲ್ ನ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ, ಮೊಬೈಲ್ ‌ನ್ನು ಅರ್ಧ ಗಂಟೆ ‌ನೋಡದಿದ್ದರೂ ಏನೋ‌ ಒಂದು ಬಗೆಯ ಕಸಿವಿಸಿ ಶುರುವಾಗಿ ಬಿಡುತ್ತದೆ. ನಮಗೆಲ್ಲ ಈ ಪರಿಯ ಅಡಿಕ್ಷನ್ ಮೊಬೈಲ್ ನೊಟ್ಟಿಗೆ ಮೂಡಿರುವುದು ವರದಾನವಾದಕ್ಕಿಂತ ಶಾಪವಾಗಿ‌ ಪರಿಣಮಿಸಿದೆ.

ಹೌದು, ದಿನದಲ್ಲಿ ನೀವು ಹೆಚ್ಚು ಸಮಯ ಕಾಲ್ ನಲ್ಲಿ ಕಾಲ ಕಳೆಯುತ್ತೀರಾ? ಕಾಲ್ ಬಂದ ಕೂಡಲೇ ಮೊಬೈಲ್ ‌ನ್ನು ಬಲಗಿವಿಗೆ ಆನಿಸಿಕೊಂಡು ಮಾತನಾಡುವಿರಾ?ಹಾಗಾದರೆ ಇಂದೇ ಈ ಕೆಲಸವನ್ನು ನಿಲ್ಲಿಸಿ.ಹೌದು ಈ ರೀತಿ ಫೋನನ್ನು ಬಲ ಕಿವಿಯ ಬಳಿ ಇಟ್ಟುಕೊಂಡು ಮಾತನಾಡುವುದರಿಂದ ಫೋನ್‍ನಿಂದ ಹೊರಹೊಮ್ಮುವ ಸಾಧಾರಣ ರೇಡಿಯೇಷನ್ ಮಿದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದಂತೆ. ಅಷ್ಟೇ ಅಲ್ಲದೆ, ಈ ರೀತಿ ಮಾತನಾಡುವುದರಿಂದ ಕೆಲವರಿಗೆ ಕಿವಿಗಳು ಸರಿಯಾಗಿ ಕೇಳಿಸದೆ ಹೋಗುವ ಸಾಧ್ಯತೆಗಳು ಇದೆಯಂತೆ.ವಿಜ್ಞಾನಿಗಳ ಪ್ರಕಾರ ಎಡಗಿವಿಗಿಂತ ಬಲಗಿವಿಗಳು ರೇಡಿಯೇಷನ್ ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆಯಂತೆ.

 

 

 

ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರೆ ಯಾವ ರೀತಿ ಅಡ್ಡಪರಿಣಾಮಗಳು ಆಗುತ್ತವೆ ಎಂಬುದರ ಬಗ್ಗೆ ಕೆಲ ವಿಜ್ಞಾನಿಗಳು ಸಂಶೋಧನೆಗಳನ್ನೂ ನಡೆಸಿದ್ದಾರೆ. 20 ರಿಂದ 25 ವಯಸ್ಸಿನ ಯುವಕ/ಯುವತಿಯರನ್ನು ಆಯ್ಕೆ ಮಾಡಿಕೊಂಡು ಅವರ ಮೇಲೆ ವಿಜ್ಞಾನಿಗಳು ಪ್ರಯೋಗ ನಡೆಸಿದ್ದಾರೆ. ಇದರಿಂದ ಅವರು ಕಂಡುಕೊಂಡಿದ್ದೇನೆಂದರೆ, ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡುವವರ ಆರೋಗ್ಯ, ಇತರರಿಗೆ ಹೋಲಿಸಿದರೆ ತುಂಬಾ ಕ್ಷೀಣಿಸುತ್ತ ಹೋಗುತ್ತದೆಂಬುದು ತಿಳಿದು ಬಂದಿದೆ.

ಎಡ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದವರನ್ನು ಪರಿಶೀಲಿಸಿದ ಮೇಲೆ ಅವರ ಆರೋಗ್ಯ ಸ್ವಲ್ಪ ಕ್ಷೀಣಿಸಿತ್ತಾದರೂ, ಬಲ ಕಿವಿಯವರಿಗೆ ಹೋಲಿಸಿದರೆ ಅದು ಕಡಿಮೆ ಎಂದು ಗೊತ್ತಾಯಿತು. ಆದಕಾರಣ ಫೋನ್‌ನಲ್ಲಿ ಮಾತನಾಡಬೇಕಾದರೆ ಎಡಗಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರು ಸ್ವಲ್ಪ ದೂರವಾಗಿ ಪೋನನ್ನು ಇಟ್ಟುಕೊಂಡು ಮಾತನಾಡಿದರೆ ಒಳಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.ಇನ್ನು ಮುಂದೆ ಸ್ನೇಹಿತರೆ ನೀವೂ ಮೊಬೈಲ್ ನಲ್ಲಿ ಮಾತನಾಡುವಾಗ ಎಡ ಕಿವಿಯ ಬಳಿ ಹಿಡಿದು ಕೊಂಡು ಮಾತನಾಡುತ್ತೀರಾ ಅಲ್ಲವೇ ?

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top