fbpx
ಹೆಚ್ಚಿನ

ಕಣ್ಣುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಹುಟ್ಟಿಸುವ ಸಂಗತಿಗಳು !

ಕಣ್ಣುಗಳ ಬಗ್ಗೆ ಹೇಳೋದಿಕ್ಕೆ ಎಲ್ಲಿಂದ ಪ್ರಾರಂಭ ಮಾಓಡೊದು ಹೇಳಿ? ಮೂರ್ತಿ ಚಿಕ್ಕಾದಾದರೂ ಕೀರ್ತಿ ದೊಡ್ಡದು ಎಂಬಂತೆ ದೇಹದಲ್ಲಿರುವ ಪುಟ್ಟ ಅಂಗಾಂಗಗಳಲ್ಲಿ ಕಣ್ಣುಗಳು ಸಹ ಒಂದಾದರು ಅದರ ಕೀರ್ತಿ ಮಾತ್ರ ದೊಡ್ಡದು. ಅಂದಹಾಗೆ ಕಣ್ಣುಗಳ ಲೀಲೆಗಳ ಕುರಿತು ಓದೋಣವೇ?

1.ಮನುಷ್ಯ ತನ್ನ ಕಣ್ಣುಗಳಿಂದ ಸುಮಾರು ಹತ್ತು ಕೋಟಿ ಬಣ್ಣಗಳನ್ನು ಗುರುತಿಸಬಹುದಂತೆ.

2.ನೀಲಿ ಕಣ್ಣು ಇರುವವವರಿಗೆ ಹೆಚ್ಚು ಮದ್ಯ ಸೇವನೆ ಅಂಡುವ ಸಾಮರ್ಥ್ಯವಿರುತ್ತದೆ ಹಾಗೂ ಅವರ ಕಣ್ಣುಗಳು ಬೆಳಕಿಗೆ ಅತ್ಯಂತ ಸಂವೇದನಾಶೀಲವಾಗಿರುತ್ತದೆ.

3.ನಮ್ಮ ಕಣ್ಣು ಒಂದು ಪಕ್ಷ ಡಿಜಿಟಲ್ ಕ್ಯಾಮೆರ ಆಗಿದಿದ್ದರೆ ಅದು 576 ಮೆಗಾ ಪಿಕ್ಸೆಲ್ ಆಗಿರುತ್ತಿತ್ತು .

4.ಎಚ್ಚರವಿರುವಾಗ ನಾವು ಶೇಕಡಾ 10% ರಷ್ಟು ಕಣ್ಣು ಮುಚ್ಚುತ್ತೇವೆ .

5.ಕಣ್ಣಿಗೂ ಸನ್ ಬರ್ನ್ ಸಮಸ್ಯೆ ಬರಬಹುದು .

6.ಮನುಷ್ಯ ಹಾಗೂ ನಾಯಿಗೆ ಮಾತ್ರ ಕಣ್ಣಿನ ಸನ್ನೆ ಅರ್ಥವಾಗುತ್ತದೆ.

7.ಕಣ್ಣುಗಳಲ್ಲಿನ ಕಾರ್ನಿಯಾಗಳು ರಕ್ತ ಹೊಂದಿಲ್ಲದ ಏಕೈಕ ಅಂಗಾಂಶಗಳಾಗಿವೆ.

8.ಜಗತ್ತಿನ ಸುಮಾರು 39 ಮಿಲಿಯನ್ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ.

9.ಮೆದುಳಿ ಬಿಟ್ಟರೆ ಮಾನವನ ದೇಹದ ಅತ್ಯಂತ ಸಂಕೀರ್ಣ ಅಂಗವೆಂದರೆ ಅದು ಕಣ್ಣುಗಳು.

10.ಕುರುಡರಾಗಿರುವ ಜನರು ಸಹ ತಮ್ಮ ಕನಸುಗಳನ್ನು ನೋಡಬಹುದು ಆದರೆ ಅವರು ಕುರುಡರಾಗಿ ಹುಟ್ಟು ಕುರುಡರಾಗಿರಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top