fbpx
ಸಮಾಚಾರ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಮರಿಸಿದ್ದು ಹೀಗೆ.

ಹೆಮ್ಮೆಯ ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ರಾಯಣ್ಣ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದ ರಾಯಣ್ಣ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತಾನು ಸಾಯುವವರೆಗೂ ಹೋರಾಡಿದ ಮಹಾತ್ಮ.

ಜನವರಿ 26 ಇಂದು ಗಣರಾಜ್ಯೋತ್ಸವ ಒಂದು ಕಡೆಯಾದರೆ, ರಾಯಣ್ಣನ ಸ್ಮರಣೋತ್ಸವ ಇನ್ನೊಂದು ಕಡೆ. ಹೀಗಾಗಿ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 188ನೇ ಸ್ಮರಣೋತ್ಸವ. ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಹೇಗಾದರೂ ಸ್ವಾತಂತ್ರ ಜ್ಯೋತಿಯನ್ನು ಹಚ್ಚಿಬಿಡಬೇಕು ಎಂದು ಹಗಲು ರಾತ್ರಿಯೆನ್ನದೆ ಹೋರಾಡಿದ ಧೀಮಂತ ನಾಯಕ ರಾಯಣ್ಣ ಇಂದಿಗೆ ವೀರಮರಣವನ್ನೊಂದಿ 188 ವರ್ಷಗಳು ಕಳೆದಿವೆ.

ಈ ಹಿನ್ನಲೆಯಲ್ಲಿ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್ ಟ್ವಿಟ್ಟರ್​ನಲ್ಲಿ ರಾಯಣ್ಣನನ್ನು ಸ್ಮರಿಸಿದ್ದಾರೆ. ಅಲ್ಲದೇ ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ. ‘ಎಲ್ಲಾ ಭಾರತೀಯರಿಗೂ ಗಣರಾಜ್ಯೋತ್ಸವದ ಶುಭಾಷಯಗಳು. ಹಗಲು ರಾತ್ರಿ ನಮ್ಮನ್ನು ಕಾಪಾಡುತ್ತಿರುವ ಸೈನಿಕರಿಗೆ ನಮ್ಮ ನಮನಗಳು. ತ್ಯಾಗ – ನಿಷ್ಠೆ- ಬಲಿದಾನದ ಪ್ರತೀಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಮರರಾದದ್ದು ಇದೇ ದಿನದಂದು… ಜೈಹಿಂದ್’ ಅಂತಾ ಟ್ವೀಟ್ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top