fbpx
ಉಪಯುಕ್ತ ಮಾಹಿತಿ

ಪ್ಯಾನ್ ಕಾರ್ಡ್ ಇಲ್ಲದೆ ಇನ್ಮೇಲೆ ಈ ಯಾವ ಕೆಲಸಗಳು ನಡೆಯೋದಿಲ್ಲ !

ಆಧಾರ್ ಕಾರ್ಡ್ ಹೊರತುಪಡಿಸಿದರೆ ಪ್ಯಾನ್ ಕಾರ್ಡ್ ಒಂದು ಉತ್ತಮ ಮತ್ತು ಅತ್ಯವಶ್ಯ ಐಡಿ ಪ್ರೂಫ್ ಆಗಿದ್ದು. ಇತ್ತೀಚಿಗೆ ಇದರ ಬಳಕೆ ತುಸು ಹೆಚ್ಚಾಗಿದೆ. ಈಗೀಗಂತೂ ಪ್ಯಾನ್ ಕಾರ್ಡ್ ಇಲ್ಲದೆ ಎಷ್ಟೋ ಕೆಲಸಗಳು ನಡೆಯುತ್ತಲೇ ಇಲ್ಲ. ಹಾಗಾಗಿ ಪ್ಯಾನ್ ಅಗತ್ಯ ಕಾರ್ಡ್ ಎಲ್ಲೆಲ್ಲಿ ಅಗತ್ಯ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಪ್ಯಾನ್ ಕಾರ್ಡ್ ಎಲ್ಲೆಲಿ ಮುಖ್ಯ ತಿಳಿಯೋಣ ಬನ್ನಿ :

  • ನಿಮ್ಮ ವ್ಯವಹಾರ ಹೆಚ್ಚಿದ್ದರೆ :

ಒಂದು ವರ್ಷದಲ್ಲಿ ನೀವು 2.5 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರಗಳನ್ನು ಮಾಡುತ್ತಿದ್ದರೆ ನಿಮಗೆ ಪ್ಯಾನ್ ಅಗತ್ಯವಿದೆ.

  • ನೀವು ಅಧಿಕ ವಹಿವಾಟು ಮಾಡುವಿರೇ?

ನಿಮ್ಮದು 5 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ವ್ಯಾಪಾರ ಸಂಸ್ಥೆಯಾಗಿದ್ದರೆ ನೀವು ಪ್ಯಾನ್ ಕಾರ್ಡ್ ಮಾಡಿಸಲೇಬೇಕು!

  • ವಾಹನಗಳ ಖರೀದಿಸಲು :

ನೀವು ಒಂದು ಕಾರು, ಬೈಕು ಅಥವಾ ಯಾವುದೇ ವಾಹನವನ್ನು ಖರೀದಿಸುತ್ತಿದ್ದರೆ ನಿಮಗೆ ಪ್ಯಾನ್ ಬೇಕು.

  • ರಿಯಲ್ ಎಸ್ಟೇಟ್ ಮಾರಾಟಕ್ಕೆ :

10 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ರಿಯಲ್ ಎಸ್ಟೇಟ್ ಮಾರಾಟಕ್ಕೆ ಪ್ಯಾನ್ ಅವಶ್ಯಕ.

  • ಸರಕು ಮತ್ತು ಸೇವೆಗಳಿಗೆ :

2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಯಾವುದೇ ಸರಕು ಮತ್ತು ಸೇವೆಗಳಿಗೆ ಪ್ಯಾನ್ ಅತ್ಯಗತ್ಯ.

  • ಬ್ಯಾಂಕ್ ಖಾತೆ ತೆರೆಯಲು :

ಬ್ಯಾಂಕ್ ಖಾತೆಯನ್ನು ತೆರೆಯಲು ಸಹ ಪ್ಯಾನ್ ಕಾರ್ಡ್ ಬೇಕೇ ಬೇಕು. ನೀವು ಒಂದು ಖಾತೆಯಲ್ಲಿ 50 ಸಾವಿರಕ್ಕೂ ಹೆಚ್ಚು ಹಣವನ್ನು ಪಾವತಿಸಿದಲ್ಲಿ ಪ್ಯಾನ್ ಸಂಖ್ಯೆ ಅಗತ್ಯ.

  • ಜೀವ ವಿಮೆ ಮಾಡಿಸಲು :

ನೀವು 50 ಸಾವಿರಕ್ಕೂ ಹೆಚ್ಚಿನ ಜೀವ ವಿಮೆ ತೆಗೆದುಕೊಂಡರೆ, ಪ್ಯಾನ್ ಅಗತ್ಯವಾಗಿ ಬೇಕು ಮತ್ತು ಹೆಚ್ಚುವರಿಯಾಗಿ, ಮ್ಯೂಚುಯಲ್ ಫಂಡ್, ಬಾಂಡುಗಳು, ವಿದೇಶಿ ಕರೆನ್ಸಿ, ಎಲ್ಲಿಯಾದರೂ ಹೂಡಿಕೆ ಮಾಡಲು ಪ್ಯಾನ್ ಅಗತ್ಯವಿರುತ್ತದೆ.

  • ಷೇರುಗಳನ್ನು ಖರೀದಿಯಿಸಲು :

ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಪಟ್ಟಿಮಾಡದ ಷೇರುಗಳನ್ನು ಖರೀದಿಸಿದ ನಂತರ ಪ್ಯಾನ್ ಅಗತ್ಯವಿರುತ್ತದೆ.

ಒಟ್ಟಿನಲ್ಲಿ ಹೊಸ ನಿಯಮದ ಪ್ರಕಾರ, ಯಾವುದೇ ಕೆಲಸಕ್ಕಾಗಿ ಜನರು 31 ಮೇ 2019 ರೊಳಗೆ ಪ್ಯಾನ್ ಕಾರ್ಡ್ ಮಾಡಿಸಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top