ಮನೋರಂಜನೆ

ಒಂದೇ ಚಿತ್ರದಲ್ಲಿ ಪುನೀತ್ ಮತ್ತು ಯಶ್ ನಟನೆ- ಫುಲ್ ಥ್ರಿಲ್ ಆದ ಅಭಿಮಾನಿಗಳು.

ತಂತಮ್ಮ ನೆಚ್ಚಿನ ನಟರುಗಳು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿರುತ್ತದೆ. ಸ್ಟಾರ್ ನಟರು ಒಟ್ಟಿಗೆ ಕಂಡಾಗಲೆಲ್ಲಾ ಈ ಬೇಡಿಕೆಯನ್ನು ನಂತರ ಮುಂದೆ ಇಡುತ್ತಲೇ ಇದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಇಬ್ಬರ ಅಭಿಮಾನಿಗಳಲ್ಲೂ ಬಹಳ ಹಿಂದಿನಿಂದಲೂ ಬೇಡಿಕೆಯಿದೆ. ಇದೀಗ ಅಪ್ಪು ಮತ್ತು ಯಶ್ ಒಟ್ಟಿಗೆ ನಟಿಸುವ ಸೂಚನೆ ಸಿಕ್ಕಿದೆ.

ಟಿ.ಎಸ್ ನಾಗಾಭರಣ ನಿರ್ದೇಶನದ `ಜುಗಾರಿ ಕ್ರಾಸ್’ ಮುಹೂರ್ತಕ್ಕೆ ಶುಭ ಹಾರೈಸಲು ಬಂದಿದ್ದ ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಂದೇ ಚಿತ್ರದಲ್ಲಿ ನಟಿಸುವುದು ಯಶ್​-ಪುನೀತ್​ ಇಬ್ಬರಿಗೂ ಇಷ್ಟವಿದೆಯಂತೆ! ಈ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಒಂದೇ ಸಿನಿಮಾದಲ್ಲಿ ಅಭಿನಯಿಸಲು ನಮಗೆ ಇಷ್ಟ ಇದೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ನಾವು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತೇವೆ,” ಎಂದು ಕೈ ಕುಲುಕುತ್ತಾ ಪುನೀತ್- ಯಶ್ ಉತ್ತರಿಸಿದರು.

ಇದಕ್ಕೂ ಮುನ್ನ ಮೊನ್ನೆ ತಮ್ಮ ‘ನಟಸಾರ್ವಭೌಮ’ ಚಿತ್ರ ಯಶಸ್ಸನ್ನು ಹಂಚಿಕೊಳ್ಳಲು ‘ಪೇಸ್ ಬುಕ್ ಲೈವ್‌’ಗೆ ಬಂದಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಎಲ್ಲ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿ ಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡದ ಪುನೀತ್ ರಾಜ್‌ಕುಮಾರ್ “ಒಳ್ಳೆಯ ಕಥೆ ಸಿಕ್ಕರೆ ನಾನು ಖಂಡಿತ ಬೇರೆ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತೇನೆ” ಎಂದಿದ್ದಾರೆ. ಅವರ ಮಾತು ಕೇಳಿದ ಸಕಲ ಸ್ಟಾರ್‌ಗಳ ಅಭಿಮಾನಿಗಳೂ ಸಖತ್ ಖುಷಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top