ಮನೋರಂಜನೆ

‘ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು’- ರಿಲೀಸ್ ಆಯ್ತು ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಟ್ರೈಲರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಟ್ರೈಲರ್​ ರಿಲೀಸ್ ಆಗಿದೆ. 2.46 ನಿಮಿಷಗಳ ಈ ಟ್ರೈಲರ್​​ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದಾರೆ. ‘ಯಜಮಾನ’ ಚಿತ್ರವು ಮಾಸ್​ ಪ್ರೇಕ್ಷಕರನ್ನು ಗಮನದಲ್ಲಿರಿಸಿ ಮಾಡಿದಂತಹ ಪಕ್ಕಾ ಫ್ಯಾಮಿಲಿ ಸಿನಿಮಾ ಎಂಬುದು ವಿಡಿಯೋ ತುಣುಕಿನಿಂದ ಬಹಿರಂಗವಾಗಿದೆ. ಇನ್ನು ಟ್ರೈಲರ್ ನಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಬಹಿರಂಗವಾಗಿದ್ದು ಮಾರ್ಚ್ 1ರಂದು ತೆರೆಕಾಣಲಿದೆ.

ದರ್ಶನ್ ಅಭಿಮಾನಿಗಳಿಗೆ ಏನು ಬೇಕೋ ಆ ಅಂಶಗಳು ಸಿನಿಮಾದಲ್ಲಿದೆ ಎನ್ನುವುದದನ್ನು ಟ್ರೇಲರ್ ತೋರುತ್ತಿದೆ. ಆಕ್ಷನ್, ಖಡಕ್ ಡೈಲಾಗ್ ಗಳ ಜೊತೆಗೆ ಮನೆ ಹುಡುಗನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆಯಾದ 30 ನಿಮಿಷಕ್ಕೆ 3 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಯಜಮಾನ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

 

 

ಯಜಮಾನ ಬಗ್ಗೆ.
ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್’ಗೆ ನಾಯಕಿಯರಾಗಿ, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿದ್ದು ಧನಂಜಯ್ ಮತ್ತು ಸಿಂಗಂ ಖ್ಯಾತಿಯ ಥಾಕುರ್ ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top