fbpx
ಸಮಾಚಾರ

ಕವಿತಾ ಲೈಂಗಿಕ ಕಿರುಕುಳ ಆರೋಪಕ್ಕೆ ಭರ್ಜರಿ ತಿರುಗೇಟು ಕೊಟ್ಟ ಆಂಡಿ- ಹೇಳಿದ್ದೇನು ಗೊತ್ತಾ?

ಕಿರುತೆರೆಯ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಅವರು ತಮಗೆ ಕಿರುಕುಳ ಆಗಿದೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ., ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಆಂಡ್ರ್ಯೂ ಕಿರುಕುಳ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಮತ್ತು ಶೋ ಮುಗಿಸಿದ ಬಳಿಕವೂ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆ್ಯಂಡ್ರೂ ಮತ್ತು ಬಿಗ್ ಬಾಸ್ ಶೋ ಮೇಲ್ವಿಚಾರಕ ಗುರುದಾಸ್ ಶೆಣೈ ವಿರುದ್ಧ ಕವಿತಾ ಗೌಡ ದೂರು ನೀಡಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆಂಡಿ “ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನು ಕವಿತಾ ಅವರನ್ನು ಭೇಟಿ ಮಾಡಿಲ್ಲ, ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ನಾನು ಅವರ ಜೊತೆ ಸಂಪರ್ಕದಲ್ಲೇ ಇಲ್ಲ. ಬೆಳಗ್ಗೆಯಿಂದ ನನಗೆ ಸುಮಾರು ಕರೆ ಬಂದಿದೆ. ಆದರೆ ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ಅವರು ಮಹಿಳಾ ಆಯೋಗಕ್ಕೆ ಏನಂತ ದೂರು ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ” ಎಂದು ಆ್ಯಂಡಿ ಹೇಳಿದ್ದಾರೆ.

“ನಾನು ಕಿರಿಕಿರಿ ಮಾಡಿದ್ದರೆ ಅದು ಕೇವಲ ಟಾಸ್ಕ್ ಭಾಗವಷ್ಟೇ, ಬಿಗ್ ಬಾಸ್ ಮನೆಯಲ್ಲಿ ಅದನ್ನು ಎಲ್ಲರು ಮಾಡುತ್ತಾರೆ. ಅಲ್ಲಿ ಆಗಿರುವ ವಿಷಯಗಳಿಗೆ ನಾನು ಸುದೀಪ್ ಅವರ ಮುಂದೆಯೇ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದೀನಿ. ವೇದಿಕೆ ಮೇಲೆ ನಿಂತುಕೊಂಡು ಕರ್ನಾಟಕದ ಜನತೆ ಮುಂದೆ ಕ್ಷಮೆ ಕೇಳಿದ್ದೇನೆ. ಬಿಗ್ ಬಾಸ್ ಮುಗಿದ ನಂತರ ಹೊರ ಬಂದ್ಮೇಲೆ ನಾನು ಅವರಿಗೆ ಕಿರಿಕಿರಿ ಮಾಡಿಲ್ಲ.. ನಾನು ಅವರ ವಿರುದ್ಧ ಪ್ರತಿ ದೂರು ನೀಡುವುದಿಲ್ಲ. ಕವಿತಾ ಮಾಡಿರುವ ಆರೋಪಗಳು ಸುಳ್ಳು. ನಾನು ಅವರ ಹಿಂದೆ ತಿರುಗಿಲ್ಲ. ಅವರಿಗೆ ತೊಂದರೆ ಆದಾಗ ಅಲ್ಲೇ ಏಕೆ ಹೇಳಲಿಲ್ಲ. 20 ದಿನದ ನಂತರ ಅವರು ನೆನಪಾಯಿತಾ.? ಇದು ಪಬ್ಲಿಸಿಟಿ ಸ್ಟಂಟಾ? ಎಂದು ಹೇಳಬೇಕಾ ಬೇಡ್ವಾ ಎಂದು ಗೊತ್ತಾಗುತ್ತಿಲ್ಲ ” ಎಂದು ಆ್ಯಂಡಿ ಪ್ರತಿಕ್ರಿಯಿಸಿದ್ದಾರೆ.

ಕವಿತಾ ಆರೋಪವೇನು?
ಶೋ ಮುಗಿದ ಮೇಲೆ ಕೂಡ ಅವರು ಸಿಕ್ಕ ಸಿಕ್ಕಲ್ಲಿ ಅವಾಚ್ಯ ಶಬ್ದ ನನ್ನ ಮೇಲೆ ಬಳಸಿದ್ದಾರೆ. ಮೈಕ್ ಹಿಡಿದುಕೊಂಡು ಆತ ಎಲ್ಲರಿಗೂ ಬೈದಿದ್ದಾನೆ. ನಾನು ಈಗ ದೂರು ನೀಡಿ ನ್ಯಾಯ ಕೇಳುತ್ತಿದ್ದೇನೆ. ತಪ್ಪು ತಿದ್ದಿಕೊಳ್ಳೋದಾದ್ರೆ ತಿದ್ದಿಕೊಳ್ಳಲಿ ಅನ್ನೋದು ನನ್ನ ಭಾವನೆ. ಕಂಪ್ಲೇಂಟ್ ಅಂತೂ ಕೊಟ್ಟಿದ್ದೇನೆ, ಕೆಲವು ವೀಡಿಯೋಗಳು ವೂಟ್​​ನಲ್ಲಿವೆ. ಅವುಗಳೇ ಸಾಕು ಸಾಕ್ಷಿಗೆ. ಹುಡಗಿ ಹಾಗೂ ಹುಡಗ ಮಧ್ಯ ಸಮಾನವಾದ ಗೌರವ ಕೊಡಬೇಕು. ಅವನಿಂದ ನನಗೆ ತುಂಬಾ ಹಿಂಸೆ ಆಗಿದೆ. ಬೇರೆ ಹುಡಗಿಯರಿಗೂ ತೊಂದರೆ ಆಗಿದೆ, ಆದರೆ ಅವರು ದೂರು ನೀಡುವ ನಿರ್ಧಾರ ತೆಗೆದುಕೊಂಡಿಲ್ಲಾ” ಎಂದು ಕವಿತಾ ಹೇಳಿದ್ದಾರೆ.

“ಬಿಗ್ ಬಾಸ್ ಮನೆಯೊಳಗೆ ಆ್ಯಂಡಿ ಕೊಡ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ಕುರಿತು ಬಿಗ್ ಬಾಸ್ ಶೋ ನೋಡಿಕೊಳ್ಳುತ್ತಿದ್ದ ಗುರುರಾಜ್ ರಾಜ್ ಶೆಣೈಗೆ ಕವಿತಾ ತಿಳಿಸಿದ್ದರಂತೆ. ಆದಾಗ್ಯೂ ಆ್ಯಂಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಹೀಗಾಗಿ ಶೆಣೈ ವಿರುದ್ದವೂ ದೂರು ನೀಡಿದ್ದಾರೆ. ಸದ್ಯ ಕವಿತಾ ಗೌಡ ಅವರಿಂದ ದೂರು ತೆಗೆದುಕೊಂಡಿದ್ದೇವೆ. ಅವರನ್ನು ವಿಚಾರಣೆಗೆ ಕರೆತರುತ್ತೇವೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದು ಆದರೆ ಅದು ಲೈಂಗಿಕ ಕಿರುಕಳ ಎಂದು ಪರಿಗನಿಸಲ್ಪಡುತ್ತದೆ. ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top