fbpx
ಸಮಾಚಾರ

ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಧೋನಿ- ವಿಡಿಯೋ ನೋಡಿ.

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಭಾರತ ಸೋತರೂ ಮಹೇಂದ್ರ ಸಿಂಗ್ ಧೋನಿ ಮಾತ್ರ ತಮ್ಮ ನಡೆಯ ಮೂಲಕ ಭಾರತೀಯರ ಮನಗೆದ್ದಿದ್ದಾರೆ. ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನ ಪ್ರವೇಶಿಸಿ ಧೋನಿ ಕಾಲಿಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ ನೆಲಕ್ಕೆ ತಾಗುವ ಮುನ್ನವೇ ಧೋನಿ ಎಚ್ಚೆತ್ತು ಧ್ವಜ ತೆಗೆದುಕೊಂಡಿದ್ದಾರೆ. ಇದು ಭಾರತೀಯರಲ್ಲಿ ಅತೀವ ಮೆಚ್ಚುಗೆಗೆ ಕಾರಣವಾಗಿದೆ.

 

 

ಅಭಿಮಾನಿಯೊಬ್ಬ ಮೈದಾನದ ಭದ್ರತಾಪಡೆಯನ್ನು ವಂಚಿಸಿ ರಾಷ್ಟ್ರಧ್ವಜ ಹಿಡಿದು ಧೋನಿ ಕಾಲಿಗೆ ನಮಸ್ಕರಿಸಿದ ಅಪರೂಪದ ಘಟನೆಗೆ ಹ್ಯಾಮಿಲ್ಟನ್’ನ ಸೆಡನ್ ಪಾರ್ಕ್ ಮೈದಾನ ಸಾಕ್ಷಿಯಾಯಿತು. ಅಭಿಮಾನಿ ಧೋನಿ ಪಾದಕ್ಕೆರಗುವ ವೇಳೆ ರಾಷ್ಟ್ರಧ್ವಜ ನೆಲಕ್ಕೆ ತಾಗುವುದರಲ್ಲಿತ್ತು. ಈ ವೇಳೆ ರಾಷ್ಟ್ರಧ್ವಜ ಹಿಡಿದು ಮೇಲೆತ್ತಿಕೊಂಡರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಧೋನಿಗೆ ಇಂತಹ ಪರಿಸ್ಥಿತಿ ಎದುರಾಗುತ್ತಿರುವುದು. ಈ ಹಿಂದೆಯೂ ಅನೇಕ ಬಾರಿ ಮೈದಾನಕ್ಕೆ ಒಳನುಗ್ಗಿದ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಈ ಎಲ್ಲ ಪರಿಸ್ಥಿತಿಗಳನ್ನು ಶಾಂತಚಿತ್ತತೆಯಿಂದ ನಿಭಾಯಿಸುವ ಧೋನಿ ಅಭಿಮಾನಿಗಳ ಜತೆಗೆ ಸಂಯಮದಿಂದ ವರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top