fbpx
ಮನೋರಂಜನೆ

ಈ ಬಿಗ್ ಬಾಸ್ ಸಹಸ್ಪರ್ಧಿ ವಿರುದ್ಧ ದೂರು ದಾಖಲಿಸಿದ ಕವಿತಾ ಗೌಡ- ಯಾಕೆ ಗೊತ್ತಾ?

ಬಿಗ್ ಬಾಸ್ ಶೋನಲ್ಲಿ ಪ್ರತೀ ಸೀಸನ್ ನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ಮನೆಯೊಳಗೇ ತುಂಬಿಕೊಂಡು ಕರುನಾಡ ಜನರಿಗೆ ಕಾಟಕೊಡುವುದು ಬಿಗ್ ಬಾಸ್ ಶೋನ ಪರಂಪರೆ. ಇತ್ತೀಚಿಗಷ್ಟೇ ಮುಗಿದ ಸೀಸನ್ 5 ಕೂಡಾ ಅದಕ್ಕೆ ಹೊರತಾಗಿಲ್ಲ. ಅಂಥಾದ್ದೇ ಒಂದು ವ್ಯಕ್ತಿತ್ವ ಆಂಡ್ರೀವ್ ಅಲಿಯಾಸ್ ಆಂಡಿಯದ್ದು. ಇಂಥಾ ಆಂಡಿ ಷೋ ಚಾಲ್ತಿಯಲ್ಲಿರುವಾಗ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಲ್ಲದೆ ಸ್ಪರ್ಧಿಗಳಿಗೂ ಕಿರಿಕಿರಿ ಕೊಟ್ಟಿದ್ದನು. ಬಹುಷಃ ಪ್ರೇಕ್ಷಕರ ವೋಟಿಂಗ್ ಅನ್ನು ಪರಿಗಣಿಸಿದ್ದಾರೆ ಈತ ಮೊದಲೆರಡು ವಾರಗಳಲ್ಲೇ ಎಲಿಮಿನೇಟ್ ಆಗಬೇಕಿತ್ತು. ಆದರೆ TRP ಕಾರಣಕ್ಕಾಗಿ ಈತನನ್ನು ಫಿನಾಲೆವರೆಗೂ ತಳ್ಳಿಕೊಂಡು ಬರಲಾಗಿತ್ತು.

ಇಂಥಾ ಆಂಡಿ ಇದೀಗ ಬಿಗ್ ಬಾಸ್ ಷೋ ಮುಗಿದ ಮೇಲೂ ತನ್ನ ಸಹಸ್ಪರ್ಧಿ ಕವಿತಾಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾನಂತೆ. ಹೌದು, ಆಂಡಿ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ದೂರು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಹೊರ ಬಂದ ಮೇಲೂ ಆಂಡ್ರ್ಯೂ ಕಿರುಕುಳ ನೀಡಿದ್ದಾರೆ. ಶೋ ಮುಗಿಸಿದ ಬಳಿಕವೂ, ಹೋದಲ್ಲಿ ಬಂದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆ್ಯಂಡ್ರೂ ಮತ್ತು ಬಿಗ್ ಬಾಸ್ ಶೋ ಮೇಲ್ವಿಚಾರಕ ಗುರುದಾಸ್ ಶೆಣೈ ವಿರುದ್ಧ ಕವಿತಾ ಗೌಡ ದೂರು ನೀಡಿದ್ದಾರೆ.

“ಬಿಗ್ ಬಾಸ್ ಮನೆಯೊಳಗೆ ಆ್ಯಂಡಿ ಕೊಡ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ಕುರಿತು ಬಿಗ್ ಬಾಸ್ ಶೋ ನೋಡಿಕೊಳ್ಳುತ್ತಿದ್ದ ಗುರುರಾಜ್ ರಾಜ್ ಶೆಣೈಗೆ ಕವಿತಾ ತಿಳಿಸಿದ್ದರಂತೆ. ಆದಾಗ್ಯೂ ಆ್ಯಂಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಹೀಗಾಗಿ ಶೆಣೈ ವಿರುದ್ದವೂ ದೂರು ನೀಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top