fbpx
ಮನೋರಂಜನೆ

ರಾಘಣ್ಣನ ಅಮ್ಮನ ಮನೆ ಚಿತ್ರವನ್ನು ವೀಕ್ಷಿಸಲಿದ್ದಾರೆ ಸಿಂಗಪೂರ್ ಪ್ರಧಾನ ಮಂತ್ರಿ.

ದಶಕಗಳ ನಂತರ ಬಣ್ಣ ಹಚ್ಚಿರುವ ರಾಘವೇಂದ್ರ ರಾಜಕುಮಾರ್ ಅವರ ಅಮ್ಮನ ಮನೆ ಸಿನಿಮಾ ಇದೆ ಮಾರ್ಚ್ 08ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಇದಕ್ಕೂ ಮುನ್ನ ಈ ಸಿನಿಮಾ ಸಿಂಗಾಪುರ್‍ನಲ್ಲಿ ಪ್ರದರ್ಶನ ಕಾಣುತ್ತಿದ್ದು ಸ್ವತಃ ಸಿಂಗಾಪೂರ್ ಪ್ರಧಾನಿ ಮಂತ್ರಿಗಳೇ ಅಮ್ಮನ ಮನೆ ಚಿತ್ರವನ್ನು ವೀಕ್ಷಿಸಲಿದ್ದಾರಂತೆ .

ಇದಕ್ಕೆ ವಿಶೇಷ ಕಾರಣವೂ ಇದೆ. 6 ವರ್ಷಗಳ ಹಿಂದೆ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸ್ಟ್ರೋಕ್ ಹೊಡೆದು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ಸಿಂಗಾಪುರ್ ಗೆ ಹೋಗಿ ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ರಾಘಣ್ಣನಿಗೆ ಚಿಕಿತ್ಸೆ ನೀಡಲಾಗಿತ್ತು.. ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದ ರಾಘಣ್ಣ ಈಗ ‘ಅಮ್ಮನ ಮನೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಸ್ವತಃ ಸಿಂಗಾಪುರ್ ಪ್ರಧಾನಿಯವರಿಗೂ ಅಚ್ಚರಿ ಮೂಡಿಸಿದ್ದು ಹೀಗಾಗಿಯೇ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರವನ್ನು ನೋಡಲು ಬರುತ್ತಿದ್ದಾರಂತೆ.

ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿರುವ ‘ಅಮ್ಮನ ಮನೆ’ ಚಿತ್ರ ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾವಾಗಿದೇ.. ಚಿತ್ರದ ಟೀಸರ್ ರಿಲೀಸ್ ಮತ್ತು ಟ್ರೈಲರ್ ಗಳೇ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಿದೆ. ಅಮ್ಮನಿಗೆ ಅನಾರೋಗ್ಯ ಉಂಟಾದಾಗ ಮಗ ಹೇಗೆ ಅಮ್ಮನ ಆರೈಕೆ ಮಾಡುತ್ತಾನೆ ಅನ್ನೋದೆ ಸಿನಿಮಾದ ಕಥೆ. ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ನಲ್ಲಿ ಆತ್ಮಶ್ರೀ ಮತ್ತು ಆರ್​​.ಎಸ್​​​. ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ.. ಉಳಿದಂತೆ ಸಮೀರ್ ಕುಲಕರ್ಣಿ ಅವರ ಸಂಗೀತ ಸಂಯೋಜನೆ ಮತ್ತು ಪಿವಿಆರ್ ಸ್ವಾಮಿ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top