fbpx
ಉದ್ಯೋಗ

ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ- 35,277 ಹುದ್ದೆಗಳಿಗೆ ಅರ್ಜಿ ಆಹ್ವಾನ.

ರೈಲ್ವೆ ನೇಮಕಾತಿ ಬೋರ್ಡ್ NTPC ನೇಮಕಾತಿ 35277 ಸ್ಟೇಷನ್ ಮಾಸ್ಟರ್, ಟಿಕೆಟ್ ಕ್ಲರ್ಕ್ ಮತ್ತು ಜ್ಯೂನಿಯರ್ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡ ನಂತರ ಆನ್‌ಲೈನ್ ಮೂಲಕ ಅರ್ಜಿಯನ್ನು ಮಾರ್ಚ್ 31,2019ರೊಳಗೆ ಸಲ್ಲಿಸಬಹುದು.

 

 

ವಯೋಮಿತಿ:
ಜುಲೈ 2,2019ರ ಅನ್ವಯ 18 ರಿಂದ 33 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ 500 ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 250ರೂ. ನಿಗದಿಪಡಿಸಲಾಗಿದ್ದು, ಅರ್ಜಿ ಶುಲ್ಕವನ್ನು ಏಪ್ರಿಲ್ 5,2019 ರೊಳಗೆ ಪಾವತಿಸಲು ಅವಕಾಶವಿರುತ್ತದೆ.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಿದ್ಯಾರ್ಹತೆ:
ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಜ್ಯೂನಿಯರ್​ ಕ್ಲರ್ಕ್​ ಕಮ್​ ಟೈಪಿಸ್ಟ್​, ಅಕೌಂಟ್ಸ್​ ಕ್ಲರ್ಕ್​ ಕಮ್​ ಟೈಪಿಸ್ಟ್​, ಜ್ಯೂನಿಯರ್​ ಟೈಂ ಕೀಪರ್​, ಟ್ರೈನ್ಸ್​​ಕ್ಲರ್ಕ್​, ಕಮರ್ಷಿಯಲ್​ ಕಮ್​ ಟಿಕೆಟ್​​ ಕ್ಲರ್ಕ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಪದವಿ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಟ್ರಾಫಿಕ್​ ಅಸಿಸ್ಟೆಂಟ್​, ಗೂಡ್ಸ್​ ಗಾರ್ಡ್​, ಸೀನಿಯರ್​ ಕಮರ್ಷಿಯಲ್​ ಕಮ್​ ಟಿಕೆಟ್​ ಕ್ಲರ್ಕ್​, ಸೀನಿಯರ್​ ಕ್ಲರ್ಕ್​ ಕಮ್​ ಟೈಪಿಸ್ಟ್​, ಜ್ಯೂನಿಯರ್​ ಅಕೌಂಟ್​ ಅಸಿಸ್ಟೆಂಟ್​ ಕಮ್​ ಟೈಪಿಸ್ಟ್​, ಸೀನಿಯರ್​ ಟೈಂ ಕೀಪರ್​ , ಕಮರ್ಷಿಯಲ್​ ಅಪ್ರೆಂಟಿಸ್​ ಮತ್ತು ಸ್ಟೇಷನ್​ ಮಾಸ್ಟರ್​ ಹುದ್ದೆಗಳಿಗೆ ಅರ್ಜಿ ಸಲಿಸಬಹುದು.

ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಏಪ್ರಿಲ್ 5,2019 ರೊಳಗೆ ಪಾವತಿಸಲು ಅವಕಾಶವಿರುತ್ತದೆ.

ಹುದ್ದೆಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ http://www.rrbkolkata.gov.in/ ಗೆ ಹೋಗಿ ಅಜಿಯನ್ನು ಮಾರ್ಚ್ 31,2019 ರೊಳಗೆ ಸಲ್ಲಿಸಬಹುದು.

ಈ ಹುದ್ದೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

http://www.rrbcdg.gov.in/uploads/cen_01_2019_eng.pdf

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top