fbpx
ಸಮಾಚಾರ

ಸುಮಲತಾ ಅಂಬರೀಶ್ ಚುನಾವಣಾ ಸ್ಪರ್ಧಿಸುವದರ ಬಗ್ಗೆ ಭಾರತಿ ವಿಷ್ಣುವರ್ದನ್ ಹೇಳಿದ್ದೇನು?

ಲೋಕಸಭಾ ಚುನಾವಣಾ ದಿನಾಂಕ ಇನ್ನು ಘೋಷಿಸುವ ಮೊದಲೇ ಮಂಡ್ಯದಲ್ಲಿ ರಾಜಕೀಯ ರಂಗೇರಿದೆ. ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದೆ. ಯಾಕಂದ್ರೆ, ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಮತ್ತು ನಟಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲಿದ್ದಾರೆ. ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರುತ್ತಿದೆ.

ಸುಮಲತಾ ಹಾಗೂ ನಿಖಿಲ್ ಇಬ್ಬರೂ ಮಂಡ್ಯದಿಂದ ಸ್ಪರ್ಧೆ ಮಾಡಿದರೇ, ಸ್ಯಾಂಡಲ್ ವುಡ್ ನಟರ ಸಾಥ್ ಯಾರ ಕಡೆ ಇರುತ್ತದೆ ಎನ್ನುವ ಪ್ರಶ್ನೆ ಮೂಡುತ್ತಿದೆ. ಹೀಗಿರುವಾಗಲೇ ಲೋಕಸಭಾ ಚುನಾವಣೆಗೆ ನಟಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಷಯದ ಬಗ್ಗೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಮಾತನಾಡಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಭಾರತಿ ವಿಷ್ಣುವರ್ಧನ್ ಅವರು ‘ಚುನಾವಣೆಗಳ ಬಗ್ಗೆ ನಮಗೆ ಜಾಸ್ತಿ ಆಸಕ್ತಿ ಇಲ್ಲ. ನಮ್ಮ ಯಜಮಾನರು ಆಗ ಅಂಬರೀಶ್ ಅವರ ಜೊತೆಗೆ ಇದ್ದರು. ಅದು ಬಿಟ್ಟರೆ ನಾವು ಚುನಾವಣೆಗಳಿಂದ ದೂರ ಹೀಗಾಗಿ ನಾನು ಸುಮಲತಾ ಅಂಬರೀಶ್ ಅಗರ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ’ ಎಂದು ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top