fbpx
ಮನೋರಂಜನೆ

ಚಿತ್ರರಂಗಕ್ಕೆ ದರ್ಶನ್ ಮಗ ವಿನೀಶ್ ಎಂಟ್ರಿ ಕೊಡೋದು ಗ್ಯಾರಂಟೀ.

ನಟ ದರ್ಶನ್‌ ತಮ್ಮ ಪುತ್ರ ವಿನೀಶ್‌ನನ್ನು ಚಿತ್ರರಂಗಕ್ಕೆ ತರುವುದು ಖಚಿತವಾಗಿದೆ. ಯಾಕಂದರೆ, ನಟ ದರ್ಶನ್ ಅವರೇ ಈ ಮಾತನ್ನು ಹೇಳಿದ್ದಾರೆ. ದರ್ಶನ್‌ ಮಗ ವಿನೀಶ್‌ ಈಗಾಗಲೇ ದರ್ಶನ್‌ ಅಭಿಮಾನಿಗಳ ಮನ ಸೆಳೆದಿದ್ದಾನೆ. ಐರಾವತ ಹಾಗೂ ಯಜಮಾನ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಯಜಮಾನ’ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ನಿಮ್ಮ ಮಗ ವಿನೀಶ್ ಸಹ ಇಂಡಸ್ಟ್ರಿಗೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ದರ್ಶನ್ ”ನನ್ನ ಮಗನನ್ನು ಸಹ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೊದ ಮೇಲೆ ನಮ್ಮದೊಂದು ಬ್ಯಾಂಡ್ ಬೇಕಲ್ವಾ” ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.

ಮುಂದಿನ ಸಿನಿಮಾ ಯಾವುದು ಎಂದು ನನ್ನ ಮಗ ಪ್ರತಿದಿನ ನನ್ನನ್ನು ಕೇಳುತ್ತಿರುತ್ತಾನೆ. ಅವನನ್ನು ಇಂಡಸ್ಟ್ರಿಗೆ ಕರೆತರಲು ಇನ್ನೂ ಸಮಯವಿದೆ. ಆದರೆ ವಿನೀಶ್​ನನ್ನು ಚಿತ್ರರಂಗಕ್ಕೆ ಕರೆತರುವುದು ಗ್ಯಾರಂಟಿ. ನನ್ನ ನಂತರ ಇಂಡಸ್ಟ್ರಿಯಲ್ಲಿ ನನ್ನದೊಂದು ಬ್ರಾಂಡ್​​ ಇರಬೇಕಲ್ಲಾ. ಅದಕ್ಕೇ ಅವನನ್ನು ಸಿನಿಮಾ ರಂಗಕ್ಕೆ ಕರೆತರುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top