fbpx
ಮನೋರಂಜನೆ

ಅಯೋಗ್ಯ ಸಿನಿಮಾ ಸಹ ನಟಿ ವಿರುದ್ಧ ಎಫ್ಐಆರ್ ದಾಖಲು- ಕಾರಣವೇನು?

ನೀನಾಸಂ ಸತೀಶ್ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿದ್ದ ಅಯೋಗ್ಯ ಸಿನಿಮಾದಲ್ಲಿ ಸಹ ನಟಿ ಪಾತ್ರವನ್ನು ಮಾಡಿದ್ದ ‘ದೃಶ್ಯ’ ಎಂಬ ನಟಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬ್ಲಾಕ್‍ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಸ್ನೇಹಿತ ಪ್ರಶಾಂತ್ ಎಂಬಾತ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ನಟಿ ದೃಶ್ಯಾಳ ಎಫ್‍ಐಆರ್ ದಾಖಲಾಗಿದೆ.

ದೃಶ್ಯ ಪ್ರಶಾಂತ್ ಇಬ್ಬರು ಕಳೆದ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದರಂತೆ. ಸಲುಗೆ ಬೆಳೆಸಿಕೊಂಡಿದ್ದ ಈಕೆ ಪ್ರಶಾಂತ್’ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಖಾತೆಗಳನ್ನು ಚೆಕ್ ಮಾಡುತ್ತಿದ್ದರಂತೆ. ಪ್ರಶಾಂತ್ ಅವರ ಇನ್ಸ್ಟಾಗ್ರಾಮ್ ನಿಂದ ಬೇರೆ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಳಂತೆ. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ.

ನನ್ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಬಳಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ. ಸದ್ಯಕ್ಕೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸದ್ಯ ನಟಿ ದೃಶ್ಯ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top