fbpx
ಮನೋರಂಜನೆ

ಕೋಟಿಗೊಬ್ಬನ ಅಡ್ಡಕ್ಕೆ ಎಂಟ್ರಿ ಕೊಟ್ಟ ಕುರುಕ್ಷೇತ್ರದ ಭೀಮ

ಪ್ರೇಕ್ಷಕ ವಲಯದಲ್ಲಿ ವಿಪರೀತ ನಿರೀಕ್ಷೆಯನ್ನು ಹುಟ್ಟುಹಾಕಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ ಕೋಟಿಗೊಬ್ಬ-3 ತನ್ನ ಮೂರನೇ ಹಂತದ ಚಿತ್ರೀಕರಣವನ್ನು ಮೊನ್ನೆಯಷ್ಟೇ ಆರಂಭಿಸಿದೆ.. ದರ್ಶನ್ ಸಿನಿಮಾದಲ್ಲಿ ಅಭಿನಯಿಸಿದ್ದ ಖಡಕ್ ನಟ ಈಗ ಕೋಟಿಗೊಬ್ಬ ೩ ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ. ಯಾರು ಆ ವಿಲನ್ ಅಂತೀರಾ ಮುಂದೆ ಓದಿ.

 

 

ದರ್ಶನ್ ಅಭಿನಯದ ಕುರುಕ್ಷೇತ್ರದಲ್ಲಿ ನಟಿಸಿರುವ ಡ್ಯಾನಿಶ್ ಅಖ್ತರ್ ಸೈಫಿ ಈಗ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕುರುಕ್ಷೇತ್ರದಲ್ಲಿ ಡ್ಯಾನಿಶ್ ಭೀಮನ ಪಾತ್ರ ನಿರ್ವಹಿಸಿದ್ದ ಡ್ಯಾನಿಶ್ ಕೋಟಿಗೊಬ್ಬ3 ನಲ್ಲಿ ಕಿಚ್ಚನ ಎದುರು ಹೊಡೆದಾಡಲಿದ್ದಾರೆ . ಡ್ಯಾನಿಶ್ ಮತ್ತು ಸುದೀಪ್ ನಡುವೆ ಫೈಟ್ ಸೀನ್ ಇದ್ದು, ಸದ್ಯದಲ್ಲೇ ಚಿತ್ರೀಕರಣ ಆಗಲಿದೆಯಂತೆ.

ಅಂದಹಾಗೆ ಕೋಟಿಗೊಬ್ಬ 3 ಚಿತ್ರಕ್ಕೆ ಸುದೀಪ್ ಅವರೇ ಕತೆಯನ್ನು ಬರೆದಿದ್ದು ಶಿವಕಾರ್ತಿಕ್ ಎಂಬ ನವನಿರ್ದೇಶಕ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕಿಚ್ಚ ಸುದೀಪ್ ಒಳಗೊಂಡಂತೆ ರವಿಶಂಕರ್, ರಾಜೇಶ್ ನಟರಂಗ, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ನವಾಬ್ ಸಾ, ತಬಲಾ ನಾಣಿ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡುತ್ತಿದ್ದು ಶೇಖರ್ ಚಂದ್ರು ಛಾಯಾಗ್ರಹಣ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top