fbpx
ಮನೋರಂಜನೆ

ಸ್ಯಾಂಡಲ್‍ವುಡ್ ನಟನಿಂದ ವಿಜಯಲಕ್ಷ್ಮೀಗೆ ಲೈಂಗಿಕ ಕಿರುಕುಳ – ದೂರು ನೀಡಿದ ನಟಿ

ಅನಾರೋಗ್ಯದಿಂದ ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿದ್ದ ನಟಿ ವಿಜಯಲಕ್ಷ್ಮಿ ಅವರ ಆರೋಗ್ಯದಲ್ಲಿ ಇದೀಗ ಸ್ವಲ್ಪ ಸುಧಾರಣೆ ಆಗುತ್ತಿದೆ. ಈ ಮಧ್ಯದಲ್ಲಿ ಸ್ಯಾಂಡಲ್ ವುಡ್ ನಟನೊಬ್ಬನಿಂದ ತಮಗೆ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಪೊಲೀಸ್ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ರವಿಪ್ರಕಾಶ್ ಅವರ ವಿರುದ್ಧ ಈ ಆರೋಪವನ್ನು ಮಾಡಿದ್ದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದ ವೇಳೆ ಹಣಕಾಸಿನ ನೆರವು ನೀಡಿ ಅಂತ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ಹಣವನ್ನು ಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವಶ್ಯವಿರುವ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ವಿಜಯಲಕ್ಷ್ಮೀ ದೂರಿನಲ್ಲಿ ಆರೋಪಿಸಿದ್ದಾರೆ.

 

 

ಇನ್ನು ವಿಜಯಲಕ್ಷ್ಮಿ ಅವರ ದೂರಿನ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಪ್ರತಿಕ್ರಿಯೆ ನೀಡಿರುವ ರವಿ ಪ್ರಕಾಶ್ “ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಅವರು ಕೇಳುತ್ತಿದ್ದ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ, ಒಂದು ಲಕ್ಷ ಹಣವನ್ನು ನೀಡಿದ್ದೆ. ಅವರಿಗೆ ಹಾಕೋಕೆ ಬಟ್ಟೆ ಕೂಡ ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಅವಶ್ಯಕ ವಸ್ತುಗಳನ್ನು ನೀಡಿ ಸಹಾಯ ಮಾಡಿದೆ.. ಆದರೆ ನನಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರ ಬಳಿ ಮಾತನಾಡಿರುವ ಕಾಲ್, ಮಸೇಜ್‍ಗಳು, ಎಲ್ಲಾ ಇವೆ ತನಿಖೆ ಮಾಡಲಿ” ಎಂದು ನಟ ರವಿ ಪ್ರಕಾಶ್ ಹೇಳಿದ್ದಾರೆ.

ನಟಿ ವಿಜಯಲಕ್ಷ್ಮಿ ಫೆಬ್ರವರಿ 26ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಅಸ್ವಸ್ಥರಾಗಿದ್ದ ನಟಿ ವಿಜಯಲಕ್ಷ್ಮಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಕಾಶಗಳು ಇಲ್ಲದೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಜಯಲಕ್ಷ್ಮಿ ಕುಟುಂಬ ಚಿತ್ರರಂಗದ ನೆರವು ಕೋರಿತ್ತು. ಆರ್ಥಿಕ ಸಹಾಯ ಮಾಡುವಂತೆ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಮಾಡಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top