fbpx
ಮನೋರಂಜನೆ

ವಿಜಯಲಕ್ಷ್ಮಿ ವಿರುದ್ಧವೇ ದೂರು ದಾಖಲು.

ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವ, ಅಸಭ್ಯ ವರ್ತನೆಯ ಆರೋಪ ಹೊತ್ತಿರುವ ನಟ ರವಿಪ್ರಕಾಶ್ ಅವರು ಇದೀಗ ವಿಜಯಲಕ್ಷ್ಮೀ ವಿರುದ್ಧವೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಮಾಧ್ಯಮಗಳ ಮೂಲಕ ಅವರ ಕಷ್ಟವನ್ನು ತಿಳಿದು ಸಹಾಯ ಮಾಡಿದ್ದೆ. ಈಗ ಅವರು ನನ್ನ ವಿರುದ್ಧವೇ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ನನ್ನ ಹಣ ನನಗೆ ವಾಪಸ್ ಕೊಡಿಸಿ’ ಎಂದು ಚೇಂಬರ್ ಅಧ್ಯಕ್ಷ ಚಿನ್ನೇಗೌಡರಿಗೆ ದೂರು ನೀಡಿದ್ದಾರೆ.

“ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಅವರು ಕೇಳುತ್ತಿದ್ದ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ, ಒಂದು ಲಕ್ಷ ಹಣವನ್ನು ನೀಡಿದ್ದೆ. ಅವರಿಗೆ ಹಾಕೋಕೆ ಬಟ್ಟೆ ಕೂಡ ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಅವಶ್ಯಕ ವಸ್ತುಗಳನ್ನು ನೀಡಿ ಸಹಾಯ ಮಾಡಿದೆ.. ಆದರೆ ನನಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರ ಬಳಿ ಮಾತನಾಡಿರುವ ಕಾಲ್, ಮಸೇಜ್‍ಗಳು, ಎಲ್ಲಾ ಇವೆ ತನಿಖೆ ಮಾಡಲಿ. ನಾನು ಆ ರೀತಿ ನಡೆದುಕೊಂಡಿಲ್ಲ. ಅವರಿಗೆ ಸಹಾಯ ಮಾಡಿದ್ದೆ ತಪ್ಪಾ.?” ಎಂದು ನಟ ರವಿ ಪ್ರಕಾಶ್ ಹೇಳಿದ್ದಾರೆ.

ರವಿಪ್ರಕಾಶ್ ವಿರುದ್ಧ ದೂರು ದಾಖಲಿಸಿದ್ದ ವಿಜಯಲಕ್ಷ್ಮಿ ರವಿಪ್ರಕಾಶ್ ಅವರು ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. “ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದ ವೇಳೆ ಹಣಕಾಸಿನ ನೆರವು ನೀಡಿ ಅಂತ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ಹಣವನ್ನು ಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವಶ್ಯವಿರುವ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ವಿಜಯಲಕ್ಷ್ಮೀ ದೂರಿನಲ್ಲಿ ಆರೋಪಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top