fbpx
ಉದ್ಯೋಗ

ರೈಲ್ವೆ ನೇಮಕಾತಿ: 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RRB

ರೈಲ್ವೆ ನೇಮಕಾತಿ ಮಂಡಳಿ(RRB) 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಆರ್ ಆರ್ ಬಿ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು ಅದರ ಪ್ರಕಾರ, ಅರ್ಹ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 07, 2019ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ಹೆಸರು: ಜ್ಯೂನಿಯರ್ ಸ್ಟೆನೊಗ್ರಾಫರ್, ಟ್ರಾನ್ಸ್ ಲೇಟರ್, ಕಾನೂನು ಸಹಾಯಕರು, ಗ್ರೇಡ್ 3 ಕೆಮಿಸ್ಟ್, ಮೆಟಲರ್ಜಿಸ್ಟ್, ಫಿಂಗರ್ ಪ್ರಿಂಟ್ ಎಕ್ಸಾಮಿನರ್, ಬಾಣಸಿಗ, ಫೋಟೋಗ್ರಾಫರ್, ಸ್ನಾತಕೋತ್ತರ ಪದವಿಯುಳ್ಳ ಶಿಕ್ಷಕ, ಇತ್ಯಾದಿ.

ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10,12ನೇ ಡಿಪ್ಲೋಮಾ, ಪದವಿ, ಬಿಇಡ್ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:
ಕನಿಷ್ಠ ಮಿತಿ: 18 ವರ್ಷ
ಗರಿಷ್ಠ ಮಿತಿ: 45 ವರ್ಷ

ಅರ್ಜಿ ಶುಲ್ಕ:
ಅರ್ಜಿ ಶುಲ್ಕ: ಮಹಿಳಾ ಅಭ್ಯರ್ಥಿಗಳು, ವಿಕಲಚೇತನರು, ಲಿಂಗಪರಿವರ್ತಿತರು, ಮಾಜಿ ಸೈನಿಕರು, ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌/ ಎಸ್‌ಬಿಐ ಚಲನ್‌ ಅಥವಾ ಪೋಸ್ಟ್‌ ಆಫೀಸ್‌ ಚಲನ್‌ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ನೇಮಕಾತಿ ಅಧೀಶ್ಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top