fbpx
ಮನೋರಂಜನೆ

ಸದ್ದಿಲ್ಲದೆ ಶುರುವಾಯ್ತು ‘ಕೆಜಿಎಫ್​ ಚಾಪ್ಟರ್ 2’ ಸಿನಿಮಾ.

ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ 2 ಚಿತ್ರ ಬುಧವಾರ (ಮಾರ್ಚ್ 13) ಸೆಟ್ಟೇರಿದೆ. ಬೆಂಗಳೂರು ವಿಜಯನಗರದ ಪಂಚಮುಖಿ ಗಣಪತಿ ಮತ್ತು ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನೆರವೇರಿತು.

ನಿರ್ಮಾಪಕ ವಿಜಯ್​ ಕಿರಗಂದೂರು ಹಾಗೂ ಮಂಜಣ್ಣ ಕ್ಲಾಫ್​ ಮಾಡಿದರೆ, ಪ್ರಶಾಂತ್​ ನೀಲ್ ಅವರ ತಾಯಿ ಭಾರತಿ ಸುಭಾಷ್​ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ಮುಹೂರ್ತದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀನಿಧಿ ಶೆಟ್ಟಿ, ಭುವನ್​ ಗೌಡ ಹಾಗೂ ಚಿತ್ರತಂಡದವರು ಭಾಗವಹಿಸಿದ್ದರು.

ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ, ಚಂದ್ರಮೌಳಿ, ಕೆ.ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಕೆಜಿಎಫ್ 2 ಸಿನಿಮಾದ ರೆಗ್ಯುಲರ್ ಶೂಟಿಂಗ್ ಏಪ್ರಿಲ್‌ನಿಂದ ಆರಂಭವಾಗುವ ಸಾಧ್ಯತೆ ಇದೆ. ಇನ್ನು ಭಾಗ 2ರಲ್ಲಿ ಹಲವಾರು ಹೊಸ ಮುಖಗಳು ಕಾಣಿಸಲಿವೆ. ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂಬ ಸೂಚನೆಯೂ ಸಿಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top