fbpx
ಮನೋರಂಜನೆ

ಅಪ್ಪ ಆದ ಲೂಸ್‍ಮಾದ ಯೋಗಿ- ಖುಷಿಯಲ್ಲಿ ಸ್ಟಾರ್ ದಂಪತಿ.

ಕನ್ನಡ ಚಿತ್ರರಂಗದಲ್ಲಿ ಲೂಸ್‍ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗೀಶ್ ಅಪ್ಪನಾಗುವ ಖುಷಿಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಲೂಸ್‍ಮಾದ ಯೋಗಿ ಅವರೇ ಬಹಿರಂಗಪಡಿಸಿದ್ದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪತ್ನಿ ಸಾಹಿತ್ಯಾರ ಫೋಟೋ ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸಮಾಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ..

ಇನ್ ಸ್ಟಾಗ್ರಾಂನಲ್ಲಿ ಪತ್ನಿ ಸಾಹಿತ್ಯ ಅವರು ಸೋಫಾ ಮೇಲೆ ಕುಳಿತಿದ್ದು, ಒಂದು ಚಿಕ್ಕ ಪಾಪುವಿನ ಉಡುಪನ್ನು ತಮ್ಮ ಮೇಲೆ ಇಟ್ಟುಕೊಂಡು, ಅದನ್ನು ತಮ್ಮ ಕೈಯಿಂದ ತೋರಿಸುತ್ತಿರುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. “ನಾವು ಬಯಸಿದಂತೆ ನೀವು ಮತ್ತು ನಿಮ್ಮಂತೆ ಇರುವ ಪುಟ್ಟ ಮಗು ಶೀಘ್ರದಲ್ಲೇ ಬರುತ್ತದೆ. ತುಂಬಾ ಸಂತೋಷವಾಗುತ್ತಿದೆ” ಎಂಬ ಅಡಿಬರಹವನ್ನು ಯೋಗೀಶ್ ಬರೆದಿದ್ದಾರೆ.

 

 

View this post on Instagram

 

You and a MINI you is all I ever wanted. It’s happening soon ❤️❤️💃💃💃

A post shared by Yogi (@loosemada_yogi) on


ಯೋಗೀಶ್ ತಮ್ಮ ಬಹುದಿನಗಳ ಗೆಳತೀ ‘ಸಾಹಿತ್ಯ’ ಅವರ ಜೊತೆ ಕುಟುಂಬ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಇಬ್ಬರು ಬಹಳ ಹಿಂದಿನಿಂದಲೂ ಪರಸ್ಪರ ಪ್ರೀತಿ ಮಾಡುತ್ತಿದ್ದರು., ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.. ಇದೀಗ ಈ ದಂಪತಿ ಪೋಷಕರಾಗುವ ಸಂಭ್ರಮದಲ್ಲಿದ್ದು ಅಭಿಮಾನಿಗಳು ನಟನಿಗೆ ಶುಭಾಶಯ ಕೋರುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top