fbpx
ಮನೋರಂಜನೆ

ಈ ಯುಗಾದಿಗೆ ಕ್ರೇಜಿಸ್ಟಾರ್ V/S ಹ್ಯಾಟ್ರಿಕ್ ಹೀರೊ.

ಹಬ್ಬಗಳಿಗೆ ಅಥವಾ ರಜಾ ದಿನಗಳಿಗೆ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುವುದು ಎಲ್ಲಾ ಚಿತ್ರರಂಗಗಳಲ್ಲೂ ನಿರೀಕ್ಷಿತ. ಕನ್ನಡ ಚಿತ್ರರಂಗಗಳಲ್ಲೂ ಹಬ್ಬದ ರಜೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಎಲ್ಲಾ ಚಿತ್ರತಂಡಗಳು ಉತ್ಸುಕರಾಗಿರುತ್ತಾರೆ.. ಕೆಲವೊಮ್ಮೆ ಸ್ಟಾರ್ ನಟರ ಸಿನಿಮಾಗಳು ಕೂಡ ಒಂದೇ ದಿನ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಕ್ಲಾಷ್ ಆಗಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದೀಗ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರು ಒಂದೇ ದಿನ ತಮ್ಮ ಸಿನಿಮಾವನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.

ಹೌದು, ದಶಕಗಳ ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಾದಾಡಲು ಸಜ್ಜಾಗಿವೆ. ಶಿವಣ್ಣ ಅಂಧನಾಗಿ ನಟಿಸಿರುವ ಕವಚ ಮತ್ತು ರವಿಚಂದ್ರನ್ ಲಾಯರ್ ಆಗಿ ನಟಿಸಿರುವ ದಶರಥ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿವೆ. ಅಲ್ಲಿಗೆ, ಕನ್ನಡದಲ್ಲಿ ಬಹುದಿನಗಳ ಬಳಿಕ ಇಬ್ಬರು ಸ್ಟಾರ್‍ಗಳ ಚಿತ್ರಗಳು ಮುಖಾಮುಖಿಯಾಗಲಿವೆ.

2002ರಲ್ಲಿ ಶಿವರಾಜ್‍ಕುಮಾರ್ ಮತ್ತು ರವಿಚಂದ್ರನ್ ಜೋಡಿಯ ಕೋದಂಡರಾಮ ತೆರೆ ಕಂಡಿತ್ತು. ಈಗ ಒಂದೇ ದಿನ ಇಬ್ಬರ ಚಿತ್ರಗಳು ತೆರೆ ಕಾಣುತ್ತಿವೆ. ಕವಚ ಚಿತ್ರ ಮಲಯಾಳಂ ಸೂಪರ್ ಹಿಟ್ ಒಪ್ಪಮ್ ಚಿತ್ರದ ರೀಮೇಕ್ ಆಗಿದ್ದು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ಇನ್ನು ದಶರಥನಿಗೆ ಎಂ.ಎಸ್.ರಮೇಶ್ ನಿರ್ದೇಶನವಿದ್ದು ಇದು ಪಕ್ಕಾ ಸ್ವಮೇಕ್ ಚಿತ್ರವಾಗಿದೆ. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರಗಳು, ಒಂದೇ ದಿನ ಬಿಡುಗಡೆಯಾಗುತ್ತಿದ್ದು ಸಿನಿಮಾ ಪ್ರೇಮಿಗಳಿಗೆ ಯುಗಾದಿ ಹಬ್ಬದಂದು ಡಬಲ್ ಔತಣಕೂಟ ನಿಕ್ಕಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top