fbpx
ಮನೋರಂಜನೆ

ಮಹೇಶ್ ಬಾಬು ಜೊತೆಗಿನ ಚಿತ್ರಕ್ಕೆ ಉಪ್ಪಿ ‘ನೋ’ ಎನ್ನಲು ಅಸಲಿ ಕಾರಣವೇನು ಗೊತ್ತಾ?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಾಯಕತ್ವದ ಮುಂಬರುವ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲು ಕನ್ನಡದ ನಟ, ನಿರ್ದೇಶಕ ಉಪೇಂದ್ರ ಅವರನ್ನು ಸಂಪರ್ಕಿಸಲಾಗಿದೆಯಂತೆ. ಆದರೆ ಈ ಆಫರ್ ಅನ್ನು ಸೂಪರ್ ಸ್ಟಾರ್ ಉಪೇಂದ್ರ ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಮಹೇಶ್ ಬಾಬು ಜೊತೆಗಿನ ಸಿನಿಮಾವನ್ನು ಉಪ್ಪಿ ತಿರಸ್ಕಾರ ಮಾಡಲು ಪ್ರಮುಖವಾದ ಕಾರಣ ಕೂಡ ಇದೆ. ಏನದು ಅಂತೀರಾ? ಮುಂದೆ ಓದಿ.

ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ ಚಿತ್ರದ ಆಫರ್ ಅನ್ನೂ ಕೂಡ ನಯವಾಗಿ ತಿರಸ್ಕರಿಸಿದ್ದಾರೆ.

ಸಿನಿಮಾಗಳಿಗಿಂತ ರಾಜಕೀಯದಲ್ಲಿ ಹೆಚ್ಚೆಚ್ಚು ಗಮನ ಹರಿಸುತ್ತಿರುವ ಉಪೇಂದ್ರ ಈ ಹಿಂದೆ ಮಲ್ಟಿ ಸ್ಟಾರ್ ಸಿನಿಮಾ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅದ್ಯಾಕೋ ಉಪ್ಪಿ ಮನಸ್ಸು ಮಾಡಲೇ ಇಲ್ಲ. ಆ ಚಿತ್ರವನ್ನು ರಿಜೆಕ್ಟ್ ಮಾಡಿದರು. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ನಟಿಸಲು ಉಪ್ಪಿಯನ್ನು ಕೇಳಿದರೆ ’ನೋ’ ಎಂದಿದ್ದಾರೆ.

ಅಂದಹಾಗೆ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಅವರು ಸ್ಪರ್ಧೆ ಮಾಡುವುದು ಬಹುತೇಕ ಅನುಮಾನವಾಗಿದ್ದು, ಉಳಿದಂತೆ ಇತರೆ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಪ್ರಯತ್ನ ಮಾಡುತ್ತಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top