ಸಮಾಚಾರ

ಪಬ್​ಜಿ ಗೇಮ್ ಆಡುತ್ತಿದ್ದ 10 ಮಂದಿ ಅರೆಸ್ಟ್- ಹುಷಾರ್ ನೀವು ಆಡಿದ್ರೆ ಜೈಲೂಟ ಫಿಕ್ಸ್

ಯುವಕರ ಮಾನಸಿಕ ಸ್ಥಿತಿಯನ್ನೇ ಕದಡುತ್ತಿರುವ ಪಬ್ ಜಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗುಜರಾತ್​ ಪೊಲೀಸರು ಮುಂದಾಗಿದ್ದಾರೆ. ಪಬ್​ಜಿ(PUBG) ಆಡುತ್ತಿದ್ದ 10 ಮಂದಿಯನ್ನು ಬಂಧಿಸಿರುವುದಾಗಿ ರಾಜ್​ಕೋಟ್​ ಪೊಲೀಸರು ತಿಳಿಸಿದ್ದಾರೆ. ಬಂಧಿತ ಯುವಕರಲ್ಲಿ ಹಲವರಿಗೆ ತಮ್ಮ ಸುತ್ತಲಿನ ಪ್ರಪಂಚದ ಅರಿವೇ ಇರಲಿಲ್ಲ. ಬಂಧಿತರ ಮೊಬೈಲ್​ ಫೋನ್​ಗಳನ್ನು ಜಪ್ತಿ ಮಾಡಲಾಗಿದ್ದು ಎಲ್ಲರಿಗೂ ಇದೊಂದು ಎಚ್ಚರಿಕೆ ಸಂದೇಶ ಆಗಿದೆ ಎಂದು ಪೊಲೀಸ್​ ಅಧಿಕಾರಿ ರೋಹಿತ್​ ರಾವಲ್​ ತಿಳಿಸಿದ್ದಾರೆ.

ಪಬ್​ಜಿ ಗೇಮ್​ ಅನ್ನು ದೇಶದ ಹಲವು ನಗರಗಳಲ್ಲಿ ನಿಷೇಧಿಸಲಾಗಿದೆ. ಅದರಂತೆ ಗುಜರಾತ್​ನ ಸೂರತ್​, ರಾಜ್​ಕೋಟ್​ ಮತ್ತು ವಡೋದರಾಗಳಲ್ಲಿ ಕಳೆದ ವಾರ ಗೇಮ್​ ಮೇಲೆ ನಿಷೇಧ ಹೇರಲಾಗಿದೆ. ಆ ನಂತರ ಗುಜರಾತ್​ನ ಹಲವು ನಗರಗಳಲ್ಲಿ ಪಬ್​ಜಿ ಮತ್ತು ಮೋಮೋ ಚಾಲೆಂಜ್​ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೋಟ್​ ಪೊಲೀಸರು ಗೇಮ್​ ಆಡುತ್ತಿದ್ದ 6 ವಿದ್ಯಾರ್ಥಿಗಳು ಸೇರಿದಂತೆ 10 ಜನರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಬ್​ಜಿ ಗೇಮ್ ಎಂದರೇನು?
ಜಗತ್ತಿನಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಪಬ್​ಜಿ ಗೇಮ್ ಅನ್ನು ಮೊಬೈಲ್​, ಕಂಪ್ಯೂಟರ್ ಗಳಲ್ಲಿ ಆಡಲಾಗುತ್ತದೆ. ಈ ಆ್ಯನಿಮೇಷನ್​ ಗೇಮ್​ನಲ್ಲಿ ಒಂದಷ್ಟು ಜನರನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ವಿಮಾನದ ಮೂಲಕ ಇಳಿಸಲಾಗುತ್ತದೆ. ಅಲ್ಲಿ ಸಿಗುವ ಶಸ್ತ್ರಾಸ್ತ್ರಗಳನ್ನು ಬಳಸಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚಕಾರಿ ಗೇಮ್ ಆಗಿದೆ. ಈ ಗೇಮ್ ಅನ್ನು ಒಬ್ಬರು, ಇಬ್ಬರು ಅಥವಾ ನಾಲ್ಕು ಜನರ ತಂಡವಾಗಿ ಕೂಡ ಆಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top