fbpx
ಮನೋರಂಜನೆ

ಪುನೀತ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿವೆ ಮೂರು ಉಡುಗೊರೆಗಳು- ಏನವು?

ಮಾರ್ಚ್ 17ಕ್ಕೆ ಪವರ್ ಸ್ಟಾರ್ ಹುಟ್ಟು ಹಬ್ಬ. ಅಭಿಮಾನಿಗಳ ಸಂಭ್ರಮ ಒಂದೆಡೆ ಆದರೆ, ಪುನೀತ್ ಅವರ ಮುಂದಿನ ಸಿನಿಮಾಗಳ ಪೋಸ್ಟರ್, ಫರ್ಸ್ಟ್ ಲುಕ್ ಹೀಗೆ ಕೆಲವು ವಿಚಾರಗಳು ಬಹಿರಂಗಗೊಳ್ಳಲಿದ್ದು ಅಭಿಮಾನಿಗಳಿಗಂತೂ ಡಬ್ಬಲ್ ಧಮಾಕ ರೆಡಿಯಾಗಿದೆ. ಸದ್ಯ ಪುನೀತ್ ಹುಟ್ಟುಹಬ್ಬಕ್ಕೆ ಮೂರು ಉಡುಗೊರೆಗಳು ಫಿಕ್ಸ್ ಆಗಿದ್ದು ನಾಳೆ ನಾಳಿದ್ದರಲ್ಲಿ ಇನ್ನೊಂದೆರಡು ಸರ್ಪ್ರೈಸ್ ಸಿಗುವ ಸಾಧ್ಯತೆ ಇದೆ.

ಜೇಮ್ಸ್ ಮೋಷನ್ ಪೋಸ್ಟರ್:
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದಲ್ಲಿ ಪುನೀತ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17 ರಂದು ಜೇಮ್ಸ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.

ಯುವರತ್ನ ಫರ್ಸ್ಟ್ ಲುಕ್ ಬಿಡುಗಡೆ:
ಪುನೀತ್ ಹುಟ್ಟುಹಬ್ಬಕ್ಕೆ ಯುವರತ್ನ ಚಿತ್ರತಂಡವು ಚಿತ್ರದ ಮೊದಲ ಲುಕ್ ಅನ್ನು ರಿವೀಲ್ ಮಾಡಲಿದೆ. ಸೂಪರ್ ಸ್ಟೈಲಿಶ್ ಮಾತು ಮಾಸ್ ಪೋಸ್ಟರ್ ಇದಾಗಲಿದ್ದು ಮಾರ್ಚ್ 17 ರಂದು ಅನಾವರಣಗೊಳ್ಳಲಿದೆ.

‘ನಟ ಸಾರ್ವಭೌಮ’ ಚಿತ್ರತಂಡದಿಂದ ಹೊಸ ಹಾಡು
ಪುನೀತ್ ಉತ್ಸವದಲ್ಲಿ ನಿರ್ದೇಶಕ ಪವನ್ ಒಡೆಯರ್ ಕೂಡ ಭಾಗಿಯಾಗುತ್ತಿದ್ದಾರೆ. ಹಾಡಿನ ಉಡುಗೊರೆ ನೀಡುವ ಮೂಲಕ ಅಪ್ಪುಗೆ ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ಈಗಾಗಲೇ ‘ನಟ ಸಾರ್ವಭೌಮ’ ಚಿತ್ರದ ಟೈಟಲ್ ಟ್ರ್ಯಾಕ್ ಅಭಿಮಾನಿಗಳ ಮನಗೆದ್ದಿದೆ. ಇದೇ ಹಾಡಿಗೆ ಹೊಸ ಲಿರಿಕ್ಸ್ ಸೇರಿಸಿ ವಿಶೇಷವಾದ ಹಾಡೊಂದನ್ನು ತಯಾರಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪು ಇದುವರೆಗೂ ಅಭಿನಯಿಸಿದ ಸಿನಿಮಾಗಳ ಬಗ್ಗೆ ಇರಲಿದಯಂತೆ. ‘

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top