fbpx
ಮನೋರಂಜನೆ

ಶಿವಣ್ಣನ ಹೊಸ ಹಾಡು ಬಿಡುಗಡೆ ಮಾಡಿದ ಬಾದ್‌ಷಾ ಸುದೀಪ್.

ಎಷ್ಟೇ ಸ್ಟಾರ್ ವಾರ್ ನಡೆದರೂ, ಎಷ್ಟೇ ಪೈಪೋಟಿ ಇದ್ದರೂ ನಮ್ಮ ನಟರು ತಮ್ಮ ತಮ್ಮ ಸಿನಿಮಾಗಳಿಗೆ ಹಿಂದಿನಿಂದಲೂ ಪರಸ್ಪರ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇದೀಗ ಅದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು ಹ್ಯಾಟ್ರಿಕ್ ಹೀರೊ ಅಭಿನಯದ ಕವಚ ಚಿತ್ರದ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.

 

ಜಿವಿಆರ್‌ ವಾಸು ಆ್ಯಕ್ಷನ್‌ ಕಟ್‌ ಹೇಳಿರುವ ಕವಚ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ದೃಷ್ಟಿ ವಿಕಲಚೇತನನಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಕಥೆ ಈ ಸಿನಿಮಾದಲ್ಲಿದ್ದು ಇಂದು ಬಿಡುಗಡೆಯಾಗುತ್ತಿರುವ ಹಾಡಿನಲ್ಲಿ ಅಪ್ಪನ ಪ್ರೀತಿಯ ಬಗ್ಗೆ ಹೇಳಲಾಗಿದೆ. ನಾಗೇಂದ್ರ ಪ್ರಸಾದ್‌ ಬರೆದಿರುವ ಈ ಹಾಡು ಸಂಪೂರ್ಣ ಊಟಿಯಲ್ಲಿ ಚಿತ್ರೀಕರಣವಾಗಿದ್ದು ಗಾನ ಗಾರುಣಿಗ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿಗೆ ಗಾಯನ ಮಾಡಿದ್ದಾರೆ.

ಅಂದಹಾಗೆ ‘ಕವಚ’ ಸಿನಿಮಾ ಮಲೆಯಾಳಂನ ಸೂಪರ್ ಹಿಟ್ ‘ಒಪ್ಪಮ್’ ಚಿತ್ರದ ರಿಮೇಕ್ ಆಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆಯಂತೆ. ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಸಿನೆಮಾಗೆ ಇದೆ. ಶಿವಣ್ಣ ಅವರು ಇಷ್ಟೂ ದಿನ ನಟಿಸಿದ ಎಲ್ಲಾ ಸಿನೆಮದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಕವಚ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡು ಹೇಗೆ ಮಿಂಚಲಿದ್ದಾರೆ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top