fbpx
ಸಮಾಚಾರ

ರೇವಣ್ಣ ಹೇಳಿಕೆಗೆ ಹ್ಯಾಟ್ರಿಕ್ ಹೀರೊ ಹೇಳಿದ್ದೇನು? ಸುಮಲತಾ ಸ್ಪರ್ಧೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಶಿವಣ್ಣ.

ಲೋಕಸಭಾ ಚುನಾವಣಾ ದಿನಾಂಕ ಘೋಷಿಸಿರುವ ಬೆನ್ನಲ್ಲೇ ಮಂಡ್ಯ ರಾಜಕೀಯ ರಂಗೇರಿದೆ. ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದ್ದು ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಚುನಾವಣೆಗೆ ಅಭ್ಯರ್ಥಿಯ ಸ್ಥಾನದಲ್ಲಿ ಮಂಡ್ಯದಲ್ಲಿ ಭಾಗವಹಿಸಿದರೆ, ಇನ್ನೊಂದು ಕಡೆ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್ ಸ್ವಾಮಿ ಕೂಡ ಅದೇ ಜಾಗಕ್ಕೆ ಸುಮಲತಾ ಅವರಿಗೆ ಪೈಪೋಟಿ ನೀಡಲಿದ್ದಾರೆ.. ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರುತ್ತಿದೆ.

ಇಬ್ಬರೂ ಚಿತ್ರರಂಗಕ್ಕೆ ಸೇರಿದವರೇ ಆಗಿರುವುದರಿಂದ ಚಿತ್ರರಂಗದ ನಟರು ಯಾರ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಚರ್ಚೆಗಳು ಇದೀಗ ಗರಿಗೆದರಿವೆ. ಸುಮಲತಾ ಚುನಾವಣಾ ಸ್ಪರ್ಧೆಯ ಕುರಿತು ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ “ಮಂಡ್ಯದಲ್ಲಿ ಸುಮಲತಾ ಅವರ ಸ್ಪರ್ಧೆ ಅವರ ವೈಯಕ್ತಿಕ ನಿರ್ಧಾರವಾಗಿದೆ. ಸುಮಲತಾ ಅವ್ರ ಪರವಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ. ಸುಮಲತಾ ಅವರು ನಮ್ಮ ಜೊತೆ ಈ ಬಗ್ಗೆ ಮಾತನಾಡಿದರೆ ಖಂಡಿತವಾಗಿ ಚರ್ಚಿಸುತ್ತೇನೆ” ಎಂದು ಹೇಳಿದ್ದಾರೆ.

ರೇವಣ್ಣ ಹೇಳಿಕೆಗೆ ಶಿವಣ್ಣನ ಪ್ರತಿಕ್ರಿಯೆ:
ಇದೇ ವೇಳೆ ಸುಮಲತಾ ಕುರಿತು ಸಚಿವ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಜಕುಮಾರ್ “ರೇವಣ್ಣ ಅವರು ಆ ರೀತಿ ಹೇಳಿಕೆ ನೀಡಿದ್ದು ತಪ್ಪು. ಯಾವುದೇ ಮಹಿಳೆಗಾದರೂ ಅಂತಹ ಪದಬಳಕೆ ಮಾಡಬಾರದು.. ಪ್ರತಿಯೊಬ್ಬರಿಗೂ ಅವರದ್ದೇ ಸ್ವಾತಂತ್ರ್ಯ ಇರುತ್ತದೆ. ಒಬ್ಬ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಎಲ್ಲರೂ ಅವರಿಗೆ ಬೆಂಬಲ ಕೊಡಬೇಕೆ ವಿನಹ ಈ ರೀತಿಯಾಗಿ ಹಗುರವಾಗಿ ಮಾತನಾಡಬಾರದು” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top