fbpx
ಮನೋರಂಜನೆ

‘ನಮ್ಮದೇ ಸರ್ಕಾರ ಇದೆ, ಸುಮಲತಾ ಪರ ಪ್ರಚಾರ ಮಾಡಿದ್ರೆ ಹುಷಾರ್’ ಜೆಡಿಎಸ್ ಮುಖಂಡನ ಧಮ್ಕಿ.

‘ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿರಬೇಕು. ಹೊರಗೆ ಬಂದು ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಶಾಸಕ ನಾರಾಯಣಗೌಡ ಮಂಗಳವಾರ ಧಮ್ಕಿ ಹಾಕಿದ್ದಾರೆ. ಈಗ ನಮ್ಮದೇ ಸರ್ಕಾರ ಇದೆ, ನಿಮಗೆ ಸರಿಯಾದ ಶಾಸ್ತಿ ಆಗುತ್ತೆ ಎಂದು ಯಶ್, ದರ್ಶನ್​ಗೆ ನಾರಾಯಣ ಗೌಡ ಪರೋಕ್ಷವಾಗಿ ಧಮ್ಕಿ ಹಾಕಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸುಮಲತಾ ಅವರ ಬೆನ್ನಿಗೆ ನಿಂತಿರುವ ಚಿತ್ರನಟರಾದ ದರ್ಶನ್ ಮತ್ತು ಯಶ್ ಅವರಿಗೆ ‘ಆಸ್ತಿ ಅಂತಸ್ತಿನ ತನಿಖೆ’ ಆಗುವ ಸಾಧ್ಯತೆ ಇದೆ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕೆ.ಆರ್.ಪೇಟೆಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರು ಸಿನಿಮಾ ನಟರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನಮ್ಮ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ನಿಮಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಸುಮ್ಮನೆ ಶೂಟಿಂಗ್ ಮಾಡಿ. ವಿನಾಕಾರಣ ಗೊಂದಲವನ್ನು ಹುಟ್ಟುಹಾಕಬಾರದು. ಇಲ್ಲದಿದ್ದರೆ ನಿಮ್ಮ ಆಸ್ತಿ ಅಂತಸ್ತಿನ ಬಗ್ಗೆ ತನಿಖೆ ಆರಂಭವಾಗಬಹುದು. ಸರಕಾರ ನಮ್ಮದಿದ್ದು, ಗೌರವದಿಂದ ಮನೆಯಲ್ಲಿರಿ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top