ಸಮಾಚಾರ

ಜೆಡಿಎಸ್ ವಿರುದ್ಧ ಅಹಿಂದ ಅಸ್ತ್ರ ಪ್ರಯೋಗಿಸಿದ ಸುಮಲತಾ ಅಂಬರೀಷ್.

ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಅಹಿಂದ ಸ್ಟ್ರಾವನ್ನು ಪ್ರಯೋಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಯೇ ಅಹಿಂದ ಅಸ್ತ್ರ ಪ್ರಯೋಗಿಸಿರುವ ಸುಮಲತಾ ಅವರು, ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು.

ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್‍ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದರು.

ದಲಿತ, ಕುರುಬ, ಗಂಗಾಮತಸ್ಥ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿತ್ವದಲ್ಲಿ ‘ಅಹಿಂದ’ ಕಾಂಬಿನೇಷನ್‌ ಗೆ ಮೊರೆ ಹೋಗುವ ಮೂಲಕ ಸುಮಲತಾ ಮುಖ್ಯಮಂತ್ರಿ ಹೆಚ್ಡಿಕೆ ಮತ್ತು ಅವರ ಪುತ್ರ ನಿಖಿಲ್ ಗೆ ತಿರುಗೇಟು ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುಮಲತಾ ಅವರು ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೂ ಸಮಾವೇಶಕ್ಕೆ ರೋಡ್ ಶೋ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top