ಸಮಾಚಾರ

“ದರ್ಶನ್ ದನದ ಮಾಂಸ ತಿನ್ನಲು ಮೈಸೂರಿಗೆ ಬರುತ್ತಿದ್ದ” ಜೆಡಿಎಸ್ ನಾಯಕ ವಾಗ್ದಾಳಿ

ಹೈವೋಲ್ಟೇಜ್ ಕಣವಾಗಿ ಪರಿಣಮಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ದಿನಾಂಕ ಘೋಷಿಸಿರುವ ಬೆನ್ನಲ್ಲೇ ರಾಜಕೀಯ ರಂಗೇರಿದೆ. ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದ್ದು ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಚುನಾವಣೆಗೆ ಅಭ್ಯರ್ಥಿಯ ಸ್ಥಾನದಲ್ಲಿ ಮಂಡ್ಯದಲ್ಲಿ ಭಾಗವಹಿಸಿದರೆ, ಇನ್ನೊಂದು ಕಡೆ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್ ಸ್ವಾಮಿ ಕೂಡ ಅದೇ ಜಾಗಕ್ಕೆ ಸುಮಲತಾ ಅವರಿಗೆ ಪೈಪೋಟಿ ನೀಡಲಿದ್ದಾರೆ.. ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರವಾಗಿ ಭರ್ಜರಿ ಪ್ರಚಾರಕ್ಕೆ ಸ್ಯಾಂಡಲ್‌ವುಡ್ ಟೊಂಕ ಕಟ್ಟಿ ನಿಂತಿದೆ. ಅದರಲ್ಲೂ ನಟರಾದ ದರ್ಶನ್ ಮತ್ತು ಯಶ್ ಅವರಿಬ್ಬರೂ ಸುಮಲತಾ ಅವರಿಗೆ ಫುಲ್ ಸಪೋರ್ಟ್ ಘೋಷಿಸಿದ್ದಾರೆ. ಸುಮಲತಾ ಪರವಾಗಿ ದರ್ಶನ್ ಮತ್ತು ಯಶ್ ಪ್ರಚಾರ ಮಾಡುತ್ತಿದ್ದಂತೆ ಅನೇಕ ಜೆಡಿಎಸ್ ಮುಖಂಡರು ನಟರ ಬಗ್ಗೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿರುವ ಎಂ ಸಂತೋಷ್ ಅವರು ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಹಿಂದೆ ದರ್ಶನ್ ಖರ್ಚಿಗೆ ಕಾಸಿಲ್ಲದೇ ಮೈಸೂರಿನ ಸಾಡೆ ರಸ್ತೆಯಲ್ಲಿ ದನದ ಮಾಂಸ ತಿನ್ನಲು ಬರುತ್ತಿದ್ದ. ಅವರು ಮೈಸೂರಿನಲ್ಲಿ ಹೇಗೆ ಇದ್ದರು ಎಂಬುದು ಗೊತ್ತು. ಈಗ ಮಂಡ್ಯದಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ.” ಎಂದು ಹೇಳಿಕೆ ನೀಡಿ ದರ್ಶನ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top