fbpx
ಸಮಾಚಾರ

‘ನನ್ನ ಬೆಂಬಲಯಿಲ್ಲ’ ಮಂಡ್ಯ ಸ್ಪರ್ಧೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ ಪುನೀತ್ ರಾಜಕುಮಾರ್.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವೇರಿದೆ. ಅನೇಕ ಸ್ಟಾರ್ ಗಳು ಕೂಡ ತಮ್ಮ ಆತ್ಮೀಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತಾವು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ದಯವಿಟ್ಟು ತಮ್ಮನ್ನು ಯಾವುದೇ ಪಕ್ಷ ಹಾಗೂ ಚುನಾವಣೆಗೆ ಎಳೆದು ತರಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಂಡಿದ್ದಾರೆ.

ಈ ಮೂಲಕ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರದ ಆಹ್ವಾನವನ್ನು ನಯವಾಗಿಯೇ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಪುನೀತ್ ರಾಜ್​ಕುಮಾರ್ ರಾಜಕೀಯದಿಂದ ದೂರ ಉಳಿದು, ಡಾ.ರಾಜ್​ ಕುಮಾರ್ ಅವರ ಹಾದಿಯನ್ನು ತುಳಿದಿದ್ದರು.  ಗೀತಾ ಶಿವರಾಜ್​ಕುಮಾರ್ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿದ್ದಾಗಲೂ ಅಪ್ಪು ಚುನಾವಣಾ ಪ್ರಚಾರಕ್ಕೆ ಕೈಜೋಡಿಸಿರಲಿಲ್ಲ.

 

 

ಪುನೀತ್ ಬರೆದ ಪತ್ರ ಈ ರೀತಿ ಇದೆ.
“ಎಲ್ಲರಿಗೂ ನನ್ನ ನಮಸ್ಕಾರ, ನನಗು ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ. ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ”

“ನಾನು ಎಲ್ಲರಿಗೂ ಅವರವರ ಹಕ್ಕು ಮತ್ತು ಕರ್ತವ್ಯ ಹಾಗು ಆಯ್ಕೆಗೆ ಸಂಬಂಧಿಸಿ ಪ್ರಬುದ್ಧರಾಗಿ ಮತ ಚಲಾಯಿಸಿ ಎಂದು ಹೆಳಬಯಸುತ್ತೇನೆ. ಆದರೆ, ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ಸೂಚಿಸುವುದಿಲ್ಲ”

ಗೌರವಾನ್ವಿತ ದೇವರಗೌಡರ ಕುಟುಂಬ ಹಾಗೂ ರೆಬಲ್ ಸ್ಟಾರ್ ಅಂಬರೀಷ್ ಅವರ ಕುಟುಂಬ ಈ ಇಬ್ಬರೂ ನಮಗೆ ಹಿತೈಷಿಗಳೇ. ಇಬ್ಬರಿಗೂ ಒಳ್ಳೆಯದಾಗಲಿ. ಆದರೆ, ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top