fbpx
ಸಮಾಚಾರ

ಐಪಿಎಲ್​ ವಿಚಾರದಲ್ಲಿಯೂ ಮತ್ತೆ ನರಿಬುದ್ಧಿ ಪ್ರದರ್ಶಿಸಿದ ಪಾಪಿ ಪಾಕಿಸ್ತಾನ.

ಪ್ರತಿ ವಿಚಾರದಲ್ಲೂ ಭಾರತದ ವಿರುದ್ಧ ನರಿ ಬುದ್ದಿ ಪ್ರದರ್ಶಿಸುವ ಉಗ್ರರ ಪೋಷಿತ ರಾಷ್ಟ್ರ ಪಾಪಿ ಪಾಕಿಸ್ತಾನ ಇದೀಗ ಐಪಿಎಲ್ ವಿಚಾರದಲ್ಲಿಯೂ ತನ್ನ ನರಿಬುದ್ಧಿ ಪ್ರದರ್ಶಿಸಿದೆ. ಇನ್ನೇನು ಶುರುವಾಗಲಿರುವ​ ಐಪಿಎಲ್​ 12 ನೇ ಸೀಸನ್​ ಪಂದ್ಯಗಳ ನೇರ ಪ್ರಸಾರವನ್ನ ಪಾಕಿಸ್ತಾನದಲ್ಲಿ ನಿಷೇಧಿಸಲು ಪಾಕ್ ಚಿಂತಿಸುತ್ತಿದೆ. ಈ ಮೂಲಕ ಭಾರತ ಹಾಗು ಬಿಸಿಸಿಐ ವಿರುದ್ಧ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.

ಫೆಬ್ರವರಿ 14ರಂದು ನಡೆದ ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸಿ ಬಿಸಿಸಿಐ ಹಾಗು ಬಿಸಿಸಿಐ ವ್ಯಾಪ್ತಿಯ ವಿವಿಧ ಕ್ರಿಕೆಟ್​ ಸಂಸ್ಥೆಗಳು ತಮ್ಮ ಕಾರ್ಯಾಲಯ ಹಾಗು ಸ್ಟೇಡಿಯಂಗಳಲ್ಲಿನ ಪಾಕಿಸ್ತಾನ ಕ್ರಿಕೆಟ್​ಗೆ ಸಂಬಂಧಿಸಿದ ಫೋಟೋಗಳು ಪಾಕಿಸ್ತಾನ ಪ್ರಧಾನ ಮಂತ್ರಿ, ಮಾಜಿ ಆಟಗಾರ ಇಮ್ರಾನ್​ ಖಾನ್​ ಸೇರಿದಂತೆ ಇತರೆ ಆಟಗಾರರ ಫೋಟೊಗಳನ್ನ ತೆಗೆದುಹಾಕಿ ಪಾಕಿಸ್ತಾನವನ್ನು ವಿರೋಧಿಸಿತ್ತು.

 

 

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಐಪಿಎಲ್ ಪಂದ್ಯಗಳ​ ನೇರಪ್ರಸಾರವನ್ನ ತನ್ನ ದೇಶದಲ್ಲಿ ಮಾಡದಿರಲು ನಿರ್ಧರಿಸಿ ಬಿಸಿಸಿಐ ಹಾಗು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಪಾಕಿಸ್ತಾನದಲ್ಲಿ ನಡೆಯುವ ಐಪಿಎಲ್ ಮಾದರಿಯ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಗಳನ್ನು ಕೂಡ ಭಾರತ ತನ್ನ ದೇಶದಲ್ಲಿ ನೇರ ಪ್ರಸಾರವನ್ನು ಬ್ಯಾನ್ ಮಾಡಿತ್ತು. ಹಾಗಾಗಿ ಇದೀಗ ಪಾಕಿಸ್ತಾನ ಕೂಡ ಐಪಿಎಲ್ ಪಂದ್ಯಗಳ ನೇರ ಪ್ರಸಾರವನ್ನು ತನ್ನ ದೇಶದಲ್ಲಿ ಬ್ಯಾನ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top